Publish Date: Sun, 07 Feb 2021 (08:50 IST)
Updated Date: Sun, 07 Feb 2021 (08:51 IST)
ಭೋಪಾಲ್ : ಪತ್ನಿಯ ಮೇಲಿನ ಬೇಸರಕ್ಕೆ ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳಿಗೆ ವಿಷ ಕೊಟ್ಟು ತಾನು ಸೇವಿಸಿದ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.
ಕೆಲವು ಸಮಸ್ಯೆಗಳಿಂದ ವ್ಯಕ್ತಿಯ ಪತ್ನಿ ಮನೆ ತೊರೆದಿದ್ದರು. ಎಷ್ಟೆ ಹುಡುಕಿದರೂ ಆಕೆ ಸಿಗಲಿಲ್ಲ ಮನೆಗೂ ಬರಲಿಲ್ಲ. ಇದರಿಂದ ಬೇಸರಗೊಂಡ ವ್ಯಕ್ತಿತನ್ನ ಇಬ್ಬರು ಮಕ್ಕಳಿಗೆ ವಿಷ ಕೊಟ್ಟು ತಾನು ಸೇವಿಸಿದ್ದಾನೆ. ಇದರಿಂದ ವ್ಯಕ್ತಿ ಹಾಗೂ ಮಗಳು ಸಾವನಪ್ಪಿದ್ದು. ಮಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.