Publish Date: Sat, 06 Feb 2021 (09:43 IST)
Updated Date: Sat, 06 Feb 2021 (09:45 IST)
ಬೆಂಗಳೂರು: ತನ್ನಿಂದ ಪ್ರತ್ಯೇಕವಾದ ಪತ್ನಿಯ ಫೋಟೋಗಳನ್ನು ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಘಟನೆ ಬೆಂಗಳೂರಿನಲ್ಲಿ ಬಿಟಿಎಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಬಗ್ಗೆ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ. ಇಬ್ಬರು ಮಕ್ಕಳ ತಾಯಿಯಾಗಿರುವ ಪತ್ನಿ ಮೂರು ವರ್ಷಗಳಿಂದ ಗಂಡನಿಂದ ದೂರವಾಗಿದ್ದಳು. ಆದರೆ ಆಕೆಯ ಮೇಲಿನ ಸಿಟ್ಟಿಗೆ ಆರೋಪಿ ಆಕೆಯ ಖಾಸಗಿ ಫೋಟೋಗಳನ್ನು ಲೀಕ್ ಮಾಡಿದ್ದ. ಇದು ಇತ್ತೀಚೆಗೆ ಮಹಿಳೆಯ ಗಮನಕ್ಕೆ ಬಂದಿತ್ತು. ಇದೀಗ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.