Select Your Language

Notifications

webdunia
webdunia
webdunia
webdunia

ಹೆಣ್ಣು ಮಗುವೆಂದು ತಿಳಿದು ಗರ್ಭಿಣಿ ಪತ್ನಿಗೆ ವೈದ್ಯ ಪತಿ ಹೀಗೆ ಮಾಡೋದಾ?!

ಹೆಣ್ಣು ಮಗುವೆಂದು ತಿಳಿದು ಗರ್ಭಿಣಿ ಪತ್ನಿಗೆ ವೈದ್ಯ ಪತಿ ಹೀಗೆ ಮಾಡೋದಾ?!
ಲಕ್ನೋ , ಶುಕ್ರವಾರ, 5 ಫೆಬ್ರವರಿ 2021 (09:47 IST)
ಲಕ್ನೋ: ಭ್ರೂಣ ಲಿಂಗ ಪರೀಕ್ಷೆ ಮಾಡುವುದೇ ಅಪರಾಧ. ಅಂತಹದ್ದರಲ್ಲಿ ಉತ್ತರ ಪ್ರದೇಶದಲ್ಲಿ ವೈದ್ಯ ಮಹಾಶಯನೊಬ್ಬ ಪತ್ನಿಯ ಲಿಂಗ ಪರೀಕ್ಷೆ ಮಾಡಿದ್ದಲ್ಲದೆ, ಆಕೆಗೆ ಒತ್ತಾಯಪೂರ್ವಕವಾಗಿ ಗರ್ಭಪಾತ ಮಾಡಿದ ಘಟನೆ ನಡೆದಿದೆ.


ಈ ಸಂಬಂಧ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ. ಅಷ್ಟೇ ಅಲ್ಲದೆ, ತನ್ನ ಪತಿ ತನಗೆ ಗೃಹಹಿಂಸೆ ನೀಡುತ್ತಿದ್ದ ಎಂದೂ ದೂರಿದ್ದಾಳೆ. 2019 ರಲ್ಲಿ ಇಬ್ಬರಿಗೂ ಮದುವೆಯಾಗಿತ್ತು. ಮದುವೆಯಾದ ಮೇಲೆ ಗೃಹ ಹಿಂಸೆ ನೀಡುತ್ತಿದ್ದ ಪತಿ ತಾನು ಗರ್ಭಿಣಿ ಎಂದು ತಿಳಿದ ಮೇಲೆ ಲಿಂಗ ಪತ್ತೆ ಮಾಡಿಸಿದ್ದ. ಹೊಟ್ಟೆಯಲ್ಲಿರುವ ಮಗು ಹೆಣ್ಣು ಎಂದು ತಿಳಿದ ಮೇಲೆ ಅಬಾರ್ಷನ್ ಮಾಡಿಸಿದ್ದ. ಇದೀಗ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಕರೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟ್ವೀಟ್ ಮಾಡಿದ ಗ್ರೇಟಾ ವಿರುದ್ಧ ಡೆಲ್ಲಿ ಪೊಲೀಸ್ ಎಫ್ಐಆರ್