Select Your Language

Notifications

webdunia
webdunia
webdunia
webdunia

ಟ್ವೀಟ್ ಮಾಡಿದ ಗ್ರೇಟಾ ವಿರುದ್ಧ ಡೆಲ್ಲಿ ಪೊಲೀಸ್ ಎಫ್ಐಆರ್

ಟ್ವೀಟ್ ಮಾಡಿದ ಗ್ರೇಟಾ ವಿರುದ್ಧ ಡೆಲ್ಲಿ ಪೊಲೀಸ್ ಎಫ್ಐಆರ್
ನವದೆಹಲಿ , ಶುಕ್ರವಾರ, 5 ಫೆಬ್ರವರಿ 2021 (09:29 IST)
ನವದೆಹಲಿ: ರೈತ ಪ್ರತಿಭಟನೆ ಬಗ್ಗೆ ವಿದೇಶೀ ಹೋರಾಟಗಾರ್ತಿ ಗ್ರೇಟಾ ಧನ್ ಬರ್ಗ್ ಟ್ವೀಟ್ ಮಾಡಿ ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿ ಶಾಂತಿ ಕದಡಲು ಯತ್ನಿಸಿದ್ದಕ್ಕೆ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

 

ಆದರೆ ಈ ಎಫ್ಐಆರ್ ನಲ್ಲಿ ‘ಅನಾಮಿಕರ’ ಮೇಲೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ನಮೂದಿಸಿದೆ. ಪಾಪ್ ಗಾಯಕಿ ರಿಹನ್ನಾ, ಹೋರಾಟಗಾರ್ತಿ ಗ್ರೇಟಾ ಸೇರಿದಂತೆ ವಿದೇಶಿಯರ ವಿರುದ್ಧ ದೆಹಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ‘ಟ್ವೀಟ್ ನಲ್ಲಿ ಪೋಸ್ಟ್ ಆಗಿದ್ದ ಟೂಲ್ ಕಿಟ್ ನ್ನು ಖಾಲಿಸ್ತಾನ ಪರ ಹೋರಾಟಗಾರರು ಸೃಷ್ಟಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಇದಕ್ಕೆ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ’ ಎಂದು ದೆಹಲಿ ಪೊಲೀಸರು ಹೇಳಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗು ಹೆಣ್ಣು ಎಂದು ತಿಳಿದು ಇಂತಹ ನೀಚ ಕೆಲಸಕ್ಕೆ ಇಳಿದ ವೈದ್ಯ ಪತಿ