Publish Date: Wed, 10 Mar 2021 (09:19 IST)
Updated Date: Wed, 10 Mar 2021 (09:20 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ಟಿ20 ಸರಣಿಗೆ ಟೀಂ ಇಂಡಿಯಾದ ಆಡುವ ಬಳಗವನ್ನು ಆಯ್ಕೆ ಮಾಡುವುದೇ ಮ್ಯಾನೇಜ್ ಮೆಂಟ್ ಗೆ ದೊಡ್ಡ ತಲೆನೋವಾಗಲಿದೆ.
ಎಷ್ಟೆಂದರೆ ಆರಂಭಿಕ ಸ್ಥಾನಕ್ಕೇ ಹೆಚ್ಚಿನ ಪೈಪೋಟಿಯಿದೆ. ರೋಹಿತ್ ಶರ್ಮಾ, ಶಿಖರ್ ಧವನ್, ಶಬ್ನಂ ಗಿಲ್ ಮತ್ತು ಕೆಎಲ್ ರಾಹುಲ್ ಸೇರಿದಂತೆ ಒಟ್ಟು ನಾಲ್ಕು ಕ್ರಿಕೆಟಿಗರು ಓಪನಿಂಗ್ ಸ್ಥಾನಕ್ಕಾಗಿ ರೇಸ್ ನಲ್ಲಿದ್ದಾರೆ. ಈ ಪೈಕಿ ರೋಹಿತ್ ಶರ್ಮಾಗೆ ಓಪನಿಂಗ್ ಸ್ಥಾನ ಖಚಿತ. ಅವರ ಜೊತೆಗೆ ಶಿಖರ್ ಧವನ್ ಆಡುವುದು ಬಹುತೇಕ ಖಚಿತ. ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡುವ ಸಾಮರ್ಥ್ಯ ಸ್ಥಾನ ಹೊಂದಿದ್ದಾರೆ.
ಇನ್ನು ವಿಕೆಟ್ ಕೀಪರ್ ಸ್ಥಾನಕ್ಕೆ ಮೂವರಿದ್ದಾರೆ. ರಿಷಬ್ ಪಂತ್, ರಾಹುಲ್, ಇಶಾನ್ ಕಿಶನ್. ಇವರಲ್ಲಿ ಯಾರನ್ನೇ ಹೊರಗಿಟ್ಟರೆ ಅನ್ಯಾಯವೇ. ನಾಲ್ಕನೇ ಕ್ರಮಾಂಕಕ್ಕೆ ಶ್ರೇಯಸ್ ಅಯ್ಯರ್ ಗೆ ಸೂರ್ಯಕುಮಾರ್ ಯಾದವ್ ಹೊಸ ಸ್ಪರ್ಧಿಯಾಗಿ ಬಂದಿದ್ದಾರೆ.
ಇನ್ನು ಬೌಲಿಂಗ್ ನಲ್ಲೂ ಯಜುವೇಂದ್ರ ಚಾಹಲ್ ಜೊತೆಗೆ ಸ್ಪಿನ್ ವಿಭಾಗದಲ್ಲಿ ಅಕ್ಸರ್ ಪಟೇಲ್, ವರುಣ್ ಚಕ್ರವರ್ತಿ, ದೀಪಕ್ ಚಹರ್, ವಾಷಿಂಗ್ಟನ್ ಸುಂದರ್ ಇದ್ದಾರೆ. ವೇಗಿಗಳಲ್ಲೂ ಭುವನೇಶ‍್ವರ್ ಕುಮಾರ್ ಜೊತೆಗೆ ನವದೀಪ್ ಸೈನಿ, ಶ್ರಾದ್ಧೂಲ್ ಠಾಕೂರ್, ಟಿ ನಟರಾಜನ್ ಇವರಲ್ಲಿ ಯಾರಿಗೆ ಸ್ಥಾನ ಕೊಡುವುದು ಎಂಬುದೇ ದೊಡ್ಡ ತಲೆನೋವಾಗಲಿದೆ.