Publish Date: Tue, 09 Mar 2021 (09:43 IST)
Updated Date: Tue, 09 Mar 2021 (09:44 IST)
ಕೋಲ್ಕೊತ್ತಾ: ಕೊರೋನಾಗೆ ವ್ಯಾಕ್ಸಿನ್ ಹಾಕಿಸಿಕೊಳ್ಳದೇ ಇನ್ನು ಎಲ್ಲೂ ಹೋಗಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಸರಣಿ ನೋಡಲು ಅಹಮ್ಮದಾಬಾದ್ ಗೆ ಹೋಗುವ ಆಸೆಯಿದೆ. ಆದರೆ ಕೊವಿಡ್ ವ್ಯಾಕ್ಸಿನ್ ಪಡೆಯದೇ ಇನ್ನೆಲ್ಲೂ ಪ್ರಯಾಣ ಮಾಡಲ್ಲ ಎಂದು ಗಂಗೂಲಿ ಹೇಳಿದ್ದಾರೆ.
ಇತ್ತೀಚೆಗಷ್ಟೇ ಗಂಗೂಲಿ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಹೀಗಾಗಿ ಅವರಿಗೆ 45 ವರ್ಷ ಮೇಲ್ಪಟ್ಟ ಅನಾರೋಗ್ಯ ಪೀಡಿತರ ಕ್ಯಾಟಗರಿಯಲ್ಲಿ ಗಂಗೂಲಿ ವ್ಯಾಕ್ಸಿನ್ ಪಡೆದುಕೊಳ್ಳಬಹುದಾಗಿದೆ. ಟೆಸ್ಟ್ ಸರಣಿಯಲ್ಲಿ ಅನಾರೋಗ್ಯದ ಕಾರಣದಿಂದ ನನಗೆ ವಿಮಾನ ಪ್ರಯಾಣ ಮಾಡಲು ವೈದ್ಯರು ಅನುಮತಿ ನೀಡಿರಲಿಲ್ಲ. ಈಗ ಆರೋಗ್ಯವಾಗಿದ್ದೇನೆ. ಮೊದಲು ವ್ಯಾಕ್ಸಿನ್ ಪಡೆದುಕೊಳ್ಳುತ್ತೇನೆ. ಬಳಿಕವಷ್ಟೇ ಪ್ರಯಾಣ ಮಾಡಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಮಾರ್ಚ್ 12 ರಿಂದ ಅಹಮ್ಮದಾಬಾದ್ ನಲ್ಲಿ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಸರಣಿ ವೇಳೆ ಗಂಗೂಲಿ ಮೈದಾನದಲ್ಲಿ ಉಪಸ್ಥಿತರಿರಲಿದ್ದಾರೆ.