Select Your Language

Notifications

webdunia
webdunia
webdunia
webdunia

ಮಾರ್ಚ್ 14 ಕ್ಕೆ ಜಸ್ಪ್ರೀತ್ ಬುಮ್ರಾ ವಿವಾಹ: ಹುಡುಗಿ ಯಾರು ಗೊತ್ತೇ?

ಜಸ್ಪ್ರೀತ್ ಬುಮ್ರಾ
ಮುಂಬೈ: ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ವಿವಾಹ ಸುದ್ದಿ ಮತ್ತೆ ಚಾಲ್ತಿಯಲ್ಲಿದೆ. ಅನುಪಮಾ ಪರಮೇಶ್ವರನ್ ಜೊತೆಗೆ ಬುಮ್ರಾ ವಿವಾಹವಾಗಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಇದು ಸುಳ್ಳು ಎಂದು ಅನುಪಮಾ ತಾಯಿಯೇ ಸ್ಪಷ್ಟಪಡಿಸಿದ್ದರು.

 

ಆದರೆ ಬುಮ್ರಾ ಮದುವೆಯಾಗಲಿರುವುದಂತೂ ಖಚಿತ. ಇದೇ ತಿಂಗಳು 14 ಮತ್ತು 15 ಕ್ಕೆ ಗೋವಾದಲ್ಲಿ ಬುಮ್ರಾ ಮದುವೆಯಾಗಲಿದ್ದಾರೆ. ಅವರು ವಿವಾಹವಾಗುತ್ತಿರುವ ಹುಡುಗಿ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಪ್ರೆಸೆಂಟರ್ ಆಗಿರುವ ಸಂಜನಾ ಗಣೇಶನ್ ಎಂದು ಹೇಳಲಾಗಿದೆ.

ಆದರೆ ಇಬ್ಬರೂ ಈ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಟೀಂ ಇಂಡಿಯಾದಿಂದ ವೈಯಕ್ತಿಕ ಕಾರಣ ನೀಡಿ ಬ್ರೇಕ್ ಪಡೆದಿರುವ ಜಸ್ಪ್ರೀತ್ ಬುಮ್ರಾ ವಿವಾಹವಾಗುವ ಸುದ್ದಿಯಂತೂ ಖಚಿತ ಎನ್ನಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೈನಾ ನೆಹ್ವಾಲ್ ರ ಸ್ಪೂರ್ತಿದಾಯಕ ಸಿನಿಮಾ ರಿಲೀಸ್ ಗೆ ರೆಡಿ