Select Your Language

Notifications

webdunia
webdunia
webdunia
Sunday, 13 April 2025
webdunia

ಟೀಂ ಇಂಡಿಯಾಗೆ ಏಷ್ಯಾ ಕಪ್ ಆಡಲೂ ಪುರುಸೊತ್ತಿಲ್ಲ!

ಟೀಂ ಇಂಡಿಯಾ
ದುಬೈ , ಸೋಮವಾರ, 8 ಮಾರ್ಚ್ 2021 (10:46 IST)
ದುಬೈ: ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಅರ್ಹತೆ ಪಡೆದಿರುವ ಟೀಂ ಇಂಡಿಯಾಗೆ ಈಗ ಏಷ್ಯಾ ಕಪ್ ಟೂರ್ನಿಯಾಡಲು ಸಮಯವಿಲ್ಲದಂತಾಗಿದೆ.


ಜುಲೈನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಇದೇ ಸಮಯದಲ್ಲಿ ಏಷ್ಯಾ ಕಪ್ ಕೂಟ ಈ ಬಾರಿ ಪಾಕಿಸ್ತಾನದ ಆತಿಥ್ಯದಲ್ಲಿ ಆಯೋಜನೆಯಾಗುತ್ತಿದೆ.

ಆದರೆ ಟೀಂ ಇಂಡಿಯಾಗೆ ಈಗ ಏಷ್ಯಾ ಕಪ್ ಗೆ ತಂಡ ಹೊಂದಿಸುವುದೇ ತಲೆನೋವಾಗಿದೆ. ಒಂದು ವೇಳೆ ಏಷ್ಯಾ ಕಪ್ ಮುಂದೂಡಿಕೆ ಮಾಡಿದರೆ ಅದು ಭಾರತದ ಬೇರೆ ಕ್ರಿಕೆಟ್ ಸರಣಿಗೆ ತೊಂದರೆಯಾಗಲಿದೆ. ಹೀಗಾಗಿ ಅದೇ ಸಮಯದಲ್ಲೇ ಏಷ್ಯಾ ಕಪ್ ನಲ್ಲೂ ಆಡಬೇಕಾಗುತ್ತದೆ.

ಹೀಗಾಗಿ ಬಿಸಿಸಿಐ ಏಷ್ಯಾ ಕಪ್ ಗೆ ಎ ದರ್ಜೆಯ ತಂಡವನ್ನು ಕಳುಹಿಸಲು ಚಿಂತನೆ ನಡೆಸುತ್ತಿದೆ. ಟೆಸ್ಟ್ ಪಂದ್ಯವಾಡದ ಸ್ಟಾರ್ ಆಟಗಾರರು ಏಷ್ಯಾ ಕಪ್ ತಂಡದ ಭಾಗವಾಗಲಿದ್ದಾರೆ. ಕೆಎಲ್ ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ ಇತ್ಯಾದಿ ಆಟಗಾರರು ಏಷ್ಯಾ ಕಪ್ ತಂಡದ ಭಾಗವಾಗಬಹುದು. ಅಂದರೆ ಕೊಹ್ಲಿ ಹೊರತಾದ ನಾಯಕತ್ವದಲ್ಲಿ ಟೀಂ ಇಂಡಿಯಾ ಏಷ್ಯಾ ಕಪ್ ಆಡುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14 ನೋಡಲು ಕಾದಿರುವ ಪ್ರೇಕ್ಷಕರಿಗೆ ನಿರಾಸೆ