Select Your Language

Notifications

webdunia
webdunia
webdunia
webdunia

ಐಪಿಎಲ್ 14: ಮೊದಲ ಪಂದ್ಯದಲ್ಲೇ ಆರ್ ಸಿಬಿಗೆ ಮುಂಬೈ ಎದುರಾಳಿ

ಐಪಿಎಲ್ 14: ಮೊದಲ ಪಂದ್ಯದಲ್ಲೇ ಆರ್ ಸಿಬಿಗೆ ಮುಂಬೈ ಎದುರಾಳಿ
ಮುಂಬೈ , ಸೋಮವಾರ, 8 ಮಾರ್ಚ್ 2021 (09:10 IST)
ಮುಂಬೈ: ಐಪಿಎಲ್ 14 ರ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಲಿದೆ.


ಐಪಿಎಲ್ 14 ರ ವೇಳಾಪಟ್ಟಿಯನ್ನು ಪ್ರಕಟಿಸಿರುವ ಬಿಸಿಸಿಐ ಮೊದಲ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ ಎಂದು ತಿಳಿಸಿದೆ. ಅಹಮ್ಮದಾಬಾದ್ ನಲ್ಲಿ ಪ್ಲೇ ಆಫ್ ಪಂದ್ಯಗಳು ಮತ್ತು ಮೇ 30 ರಂದು ಫೈನಲ್ಸ್ ನಡೆಯಲಿದೆ. ಮಧ್ಯಾಹ್ನದ ಪಂದ್ಯ 3.30 ಕ್ಕೆ ಮತ್ತು ರಾತ್ರಿ ಪಂದ್ಯಗಳು 7.30 ಕ್ಕೆ ಆರಂಭವಾಗಲಿದೆ.

ತಂಡಗಳು ಲೀಗ್ ಹಂತದಲ್ಲಿ ಮೂರು ಬಾರಿ ಮಾತ್ರ ಬೇರೆ ಬೇರೆ ಮೈದಾನಕ್ಕೆ ಪ್ರಯಾಣ ಬೆಳೆಸುವ ಅನಿವಾರ್ಯತೆ ಎದುರಾಗಲಿದೆ. ಇನ್ನು, ಈ ಬಾರಿ ಪ್ರೇಕ್ಷಕರಿಗೆ ಅವಕಾಶ ನೀಡಲಾಗುತ್ತಿಲ್ಲ. ಕೊನೆಯ ಹಂತದಲ್ಲಿ ಪರಿಸ್ಥಿತಿ ನೋಡಿಕೊಂಡು ಸೀಮಿತ ಪ್ರೇಕ್ಷಕರಿಗೆ ಅನುವು ಮಾಡಿಕೊಡುವ ಬಗ್ಗೆ ಚಿಂತನೆ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಲಾರ್ಡ್ಸ್ ನಲ್ಲಿ ನಡೆಯಲ್ಲ!