Publish Date: Thu, 18 Mar 2021 (08:05 IST)
Updated Date: Thu, 18 Mar 2021 (08:07 IST)
ಜೈಪುರ : ಅಪ್ರಾಪ್ತ ಬಾಲಕಿಗೆ 70 ವರ್ಷದ ವೃದ್ಧನೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ರಾಜಸ್ಥಾನದ ಜೈಪುರದ ಮುರ್ಲಿಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಸಂತ್ರಸ್ತೆ ಆರೋಪಿ ವೃದ್ಧನ ಮೊಮ್ಮಗಳ ಜೊತೆ ಆಟವಾಡುತ್ತಿದ್ದಾಗ ಅವಳನ್ನು ಮನೆಯೊಳಗೆ ಕರೆದ ವೃದ್ಧ ಅವಳ ಖಾಸಗಿ ಭಾಗಗಳನ್ನು ಮುಟ್ಟಿ ಕಿರುಕುಳ ನೀಡಿದ್ದಾನೆ. ಮನೆಗೆ ಬಂದ ಸಂತ್ರಸ್ತೆ ಈ ವಿಚಾರವನ್ನು ತನ್ನ ಮನೆಯವರಿಗೆ ತಿಳಿಸಿದ್ದಾಳೆ.
ಈ ಹಿನ್ನಲೆಯಲ್ಲಿ ಅವರು ಪೊಲೀಸ್ ಠಾಣೆಯಲ್ಲಿ ವೃದ್ಧನ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ ಎನ್ನಲಾಗಿದೆ.