Select Your Language

Notifications

webdunia
webdunia
webdunia
Sunday, 13 April 2025
webdunia

ರಮೇಶ್ ಜಾರಕಿಹೊಳಿ ಪ್ರಕರಣ: ಸಿಡಿ ಯುವತಿಯ ತಂದೆಯಿಂದ ಕಿಡ್ನ್ಯಾಪ್ ಕೇಸ್

ರಮೇಶ್d ಜಾರಕಿಹೊಳಿ
ಬೆಂಗಳೂರು , ಬುಧವಾರ, 17 ಮಾರ್ಚ್ 2021 (09:49 IST)
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿದ್ದ ಯುವತಿಯ ತಂದೆ ತನ್ನ ಮಗಳನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು ದೂರು ನೀಡಿ ಕೇಸ್ ಗೆ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ.

 

ಬೆಳಗಾವಿಯ ಪೊಲೀಸ್ ಠಾಣೆಯಲ್ಲಿ ಯುವತಿಯ ಪೋಷಕರು ದೂರು ದಾಖಲಿಸಿದ್ದಾರೆ. ತಮ್ಮ ಮಗಳನ್ನು ಮಾರ್ಚ್ 2 ರಂದು ಅಪಹರಿಸಿ ಅಕ್ರಮವಾಗಿ ಬಂಧನದಲ್ಲಿಟ್ಟು, ನಕಲಿ ಸಿಡಿ ಮಾಡಿ ಮಾಧ‍್ಯಮಗಳಿಗೆ ಹರಿಯಬಿಟ್ಟು ಅವಮಾನ ಮಾಡಿದ್ದಾರೆ.

ಮಾಧ್ಯಮಗಳಲ್ಲಿ ವಿಡಿಯೋ ನೋಡಿ ಮಗಳಿಗೆ ಕರೆ ಮಾಡಿದಾಗ ವಿಡಿಯೋದಲ್ಲಿರುವುದು ನಾನಲ್ಲ. ಎಡಿಟ್ ಮಾಡಿ ನನ್ನ ಮುಖ, ಧ್ವನಿ ಸೇರಿಸಲಾಗಿದೆ. ಅದು ನಕಲಿ ಎಂದು ಗೊತ್ತಾದ ಬಳಿಕ ಊರಿಗೆ ಬರುತ್ತೇನೆ ಎಂದಿದ್ದಳು. ಕರೆ ಮಾಡಿದಾಗ ಭಯದಿಂದ ಮಾತನಾಡುತ್ತಿದ್ದಳು. ನಾನು ಎಲ್ಲಿದ್ದೇನೆಂದೇ ಗೊತ್ತಿಲ್ಲ ಎಂದಿದ್ದಳು. ಇದನ್ನು ನೋಡಿದರೆ ಯಾರೋ ಆಕೆಯನ್ನು ಅಪಹರಿಸಿ ಒತ್ತಾಯಪೂರ್ವಕವಾಗಿ ವಿಡಿಯೋ ಮಾಡಿ ಬಿಡುತ್ತಿದ್ದಾರೆ ಎಂಬ ಅನುಮಾನವಿದೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುತೂಹಲ ಮೂಡಿಸಿದ ನಿರ್ದೇಶಕ ಇಂದ್ರಜಿತ್ ಲಂಕೇಶ್-ರಮೇಶ್ ಜಾರಕಿಹೊಳಿ ಭೇಟಿ