ಹೈದರಾಬಾದ್ : ನಿನ್ನೆ ನವದೆಹಲಿಯಲ್ಲಿ 2019ರಲ್ಲಿ ಬಿಡುಗಡೆಯಾದ ಚಿತ್ರಗಳಿಗೆ 67ನೇ ನ್ಯಾಷನಲ್ ಫಿಲ್ಮ್ ಅವಾರ್ಡ್ ಘೋಷಣೆ ಮಾಡಲಾಗಿದೆ.
ಇದರಲ್ಲಿ ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಸಾಮಾಜಿಕ ಸಂದೇಶ ಆಧಾರಿತ ಮಹರ್ಷಿ ಚಿತ್ರಕ್ಕೆ ಅತ್ಯುತ್ತಮ ಜನಪ್ರಿಯ ಚಿತ್ರ ಎಂಬ ಪ್ರಶಸ್ತಿ ಲಭಿಸಿದೆ. ಹಾಗೇ ನಾನಿ ಅಭಿನಯದ ಜರ್ಸಿ ಚಿತ್ರ 2 ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ರಾಜು ಸುಂದರಂ ಅವರು ಅತ್ಯುತ್ತಮ ನೃತ್ಯಸಂಯೋಜನೆ ಪ್ರಶಸ್ತಿಯನ್ನು ಪಡೆದಿದ್ದಾರೆ. ಜೂನಿಯರ್ ಎನ್ ಟಿಆರ್ ಅಭಿನಯದ ಜನತಾ ಗ್ಯಾರೇಜ್ ನಂತರ ರಾಜು ಸುಂದರಂ ಅವರಿಗೆ ಇದು 2ನೇ ಪ್ರಶಸ್ತಿಯಾಗಿದೆ.