Publish Date: Tue, 23 Mar 2021 (09:33 IST)
Updated Date: Tue, 23 Mar 2021 (09:35 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಈಗ ಅಂಧನಾಗುತ್ತಿದ್ದಾರೆ! ಅಂಧನಾಗಿರುವ ಫೋಟೋವನ್ನು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
ಅಂದರೆ ಸಿಂಪಲ್ ಸುನಿ ನಿರ್ದೇಶನದ ಸಖತ್ ಸಿನಿಮಾದಲ್ಲಿ ಗಣೇಶ್ ಅಂಧನ ಪಾತ್ರವೊಂದನ್ನು ನಿಭಾಯಿಸಲಿದ್ದಾರೆ. ಇದೇ ಮೊದಲ ಬಾರಿಗೆ ಗಣೇಶ್ ಇಂತಹದ್ದೊಂದು ಸವಾಲಿನ ಪಾತ್ರ ಮಾಡುತ್ತಿದ್ದಾರೆ. ನನ್ನ ಈ ಹೊಸ ಪಾತ್ರಕ್ಕೆ ನಿಮ್ಮ ಹಾರೈಕೆಯಿರಲಿ ಎಂದಿದ್ದಾರೆ.
ತುಂಬಾ ಸವಾಲಿನ ಪಾತ್ರವಿದು. ನನಗೆ ಇದು ಹೊಸ ಅನುಭವ. ಒಬ್ಬ ಕಲಾವಿದನಾಗಿ ಇಷ್ಟಪಟ್ಟು ಮಾಡುತ್ತಿರುವ ಪಾತ್ರವಿದು ಗಣೇಶ್ ಹೇಳಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಿಶ್ವಿಕಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.