Select Your Language

Notifications

webdunia
webdunia
webdunia
webdunia

ಕಣ್ಣು ಹೊಡೆಯಾಕ ಹಾಡಿಗೆ ಕೋಟಿ ವೀಕ್ಷಣೆ: ಖುಷ್ ಆದ ಶ್ರೇಯಾ ಘೋಷಾಲ್

ಕಣ್ಣು ಹೊಡೆಯಾಕ ಹಾಡಿಗೆ ಕೋಟಿ ವೀಕ್ಷಣೆ: ಖುಷ್ ಆದ ಶ್ರೇಯಾ ಘೋಷಾಲ್
ಬೆಂಗಳೂರು , ಸೋಮವಾರ, 22 ಮಾರ್ಚ್ 2021 (10:00 IST)
ಬೆಂಗಳೂರು: ರಾಬರ್ಟ್ ಸಿನಿಮಾದ ‘ಕಣ್ಣು ಹೊಡೆಯಾಕ’ ಹಾಡಿಗೆ 2 ಕೋಟಿ ವೀಕ್ಷಣೆ ಬಂದಿರುವುದು ಗಾಯಕಿ ಶ್ರೇಯಾ ಘೋಷಾಗೆ ಸಂತಸ ತಂದಿದೆ.


ಉತ್ತರ ಕರ್ನಾಟಕ ಶೈಲಿಯ ಭಾಷೆಯ ಕಣ್ಣು ಹೊಡೆಯಾಕ ಹಾಡಿನ ಸಾಲುಗಳನ್ನು ಕನ್ನಡ ಮೂಲದವರೇ ಹಾಡುವುದು ಕಷ್ಟ. ಆದರೆ ಶ್ರೇಯಾ ಇದನ್ನು ಆರಾಮವಾಗಿ ಹಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ಈ ಹಾಡಿಗೆ ಯೂ ಟ್ಯೂಬ್ ನಲ್ಲಿ 2 ಕೋಟಿ ವೀಕ್ಷಣೆ ಸಿಕ್ಕಿದೆ. ಇದಕ್ಕೆ ಸಂತೋಷ ವ್ಯಕ್ತಪಡಿಸಿರುವ ಶ್ರೇಯಾ ತಮ್ಮ ಟ್ವಿಟರ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕ ಶೈಲಿಯ ಪದಗಳನ್ನು ಹಾಡಿರುವೆ. ಇದಕ್ಕೆ 2 ಕೋಟಿ ವೀಕ್ಷಣೆ ಸಿಕ್ಕಿರುವುದು ಸಂತೋಷವುಂಟು ಮಾಡಿದೆ. ಇದಕ್ಕೆ ಕಾರಣರಾದ ಯೋಗರಾಜ್ ಭಟ್, ಅರ್ಜುನ್ ಜನ್ಯಾ, ನಟ ದರ್ಶನ್, ಆಶಾ ಭಟ್ ಗೆ ನನ್ನ ಧನ್ಯವಾದಗಳು’ ಎಂದು ಟ್ವೀಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುಷ್ಪಾ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ವಿಲನ್ ಆಗಿ ಫೈಟ್ ಮಾಡಲಿದ್ದಾರೆ ಈ ನಟ