Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ನಟ ಸುನಿಲ್ ರಾವ್ ಗೆ ಕೊರೋನಾ ಸೋಂಕು

ಸ್ಯಾಂಡಲ್ ವುಡ್ ನಟ ಸುನಿಲ್ ರಾವ್ ಗೆ ಕೊರೋನಾ ಸೋಂಕು
ಬೆಂಗಳೂರು , ಮಂಗಳವಾರ, 23 ಮಾರ್ಚ್ 2021 (09:12 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟ ಸುನಿಲ್ ರಾವ್ ಗೆ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿದೆ. ಸದ್ಯಕ್ಕೆ ನಟ ಹೋಂ ಕ್ವಾರಂಟೈನ್ ನಲ್ಲಿದ್ದಾರೆ ಎಂದು ತಿಳಿದುಬಂದಿದೆ.


ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೊರೋನಾ ಖಚಿತವಾಗಿರುವ ವಿಚಾರವನ್ನು ಹಂಚಿಕೊಂಡಿರುವ ಸುನಿಲ್ ರಾವ್ ತಮ್ಮ ಸಂಪರ್ಕಕ್ಕೆ ಇತ್ತೀಚೆಗೆ ಬಂದವರಿದ್ದರೆ ಮುನ್ನೆಚ್ಚರಿಕೆ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.

ತಾವು ಹೋಂ ಕ್ವಾರಂಟೈನ್ ನಲ್ಲಿದ್ದು, ಕುಟುಂಬಸ್ಥರೂ ಎಚ್ಚರಿಕೆಯಲ್ಲಿದ್ದಾರೆ. ನನಗೆ ಸಣ್ಣ ಪ್ರಮಾಣದ ಸೋಂಕಿನ ಲಕ್ಷಣಗಳು ಕಂಡುಬಂದಿದ್ದು,ಕುಟುಂಬ ಜೊತೆಗೇ ಇದ್ದೇನೆ. ಕಳೆದು ಕೆಲವು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರಿದ್ದರೆ ಪರೀಕ್ಷಿಸಿಕೊಳ್ಳಿ’ ಎಂದು ಸುನಿಲ್ ರಾವ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನಪ್ರಿಯ ಹಾಸ್ಯ ನಟ ಥೀಪೆಟ್ಟಿ ಗಣೇಶನ್ ನಿಧನ