Select Your Language

Notifications

webdunia
webdunia
webdunia
webdunia

‘ಕಾದಲ್' ಚಿತ್ರದಲ್ಲಿ ನಟಿಸಿದ ನಟ ಪಲ್ಲುಬಾಬು ನಿಧನ

‘ಕಾದಲ್' ಚಿತ್ರದಲ್ಲಿ ನಟಿಸಿದ ನಟ ಪಲ್ಲುಬಾಬು ನಿಧನ
ಚೆನ್ನೈ , ಬುಧವಾರ, 24 ಮಾರ್ಚ್ 2021 (11:24 IST)
ಚೆನ್ನೈ : ನಿರ್ದೇಶಕ ಶಂಕರ್ ನಿರ್ಮಿಸಿದ, ಬಾಲಾಜಿ ಶಕ್ತಿವೇಲ್ ನಿರ್ದೇಶಿಸಿದ 2004 ರಲ್ಲಿ ಬಿಡುಗಡೆಯಾಗಿ ಬ್ಲಾಕ್ಬಸ್ಟರ್ ಆದ  ‘ಕಾದಲ್’ ಚಿತ್ರದಲ್ಲಿ ನಟಿಸಿದ ನಟರೊಬ್ಬರು ನಿಧನರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. 

ಕಾದಲ್ ಚಿತ್ರದಲ್ಲಿ ನಟ ಪಲ್ಲುಬಾಬು, ವಿರುಚಿಗಕಾಂತ್ ಪಾತ್ರದಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದರು. ಆದರೆ ಲಾಕ್ ಡೌನ್ ಸಮಯದಲ್ಲಿ ಅವರ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು. ಅವರಿಗೆ ಕೆಲವು ನಟರು ಸಹಾಯ ಮಾಡಿದ್ದರು.

ಆದರೆ ಅವರು ಇತ್ತೀಚೆಗೆ ಆಟೋದಲ್ಲಿ ಮಲಗಿದ್ದು, ಅಲ್ಲೇ ಸಾವನಪ್ಪಿದ್ದಾರೆ. ಅವರ ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಹಲವರು ಸಂತಾಪ ಸೂಚಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುಷ್ಪಾ ಚಿತ್ರದಲ್ಲಿ ಖಳನಾಯಕನ ಪಾತ್ರಕ್ಕೆ ಮೊದಲು ಆಯ್ಕೆಯಾದ ನಟ ಯಾರು ಗೊತ್ತಾ?