Publish Date: Thu, 25 Mar 2021 (10:40 IST)
Updated Date: Thu, 25 Mar 2021 (10:43 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಸದ್ದಿಲ್ಲದೇ ಅರವಿಂದ್ ಮತ್ತು ದಿವ್ಯಾ ಉರುಡುಗ ನಡುವೆ ಏನೋ ನಡೆಯುತ್ತಿದೆ ಎಂಬ ಗುಮಾನಿ ಎಲ್ಲರದ್ದು. ಇಬ್ಬರ ನಡುವಿನ ಪ್ರೀತಿ ವಿಚಾರವನ್ನು ಈಗ ಅರವಿಂದ್ ಹೊರಹಾಕಿದ್ದಾರೆ.
ನಿಮ್ಮಿಬ್ಬರ ನಡುವೆ ನಿಜವಾಗ್ಲೂ ಏನು ಭಾವನೆಯಿದೆ? ಎಂದು ಶುಭಾ ಪೂಂಜಾ ದಿವ್ಯಾ ಮತ್ತು ಅರವಿಂದ್ ಜೊತೆಗೆ ಮಾತನಾಡಿದ್ದಾರೆ. ಈಗ ಬಿಗ್ ಬಾಸ್ ಮನೆಯೊಳಗೆ ನಿಮಗೆ ದಿವ್ಯಾ ಇಷ್ಟಬಹುದು. ಒಂದು ವೇಳೆ ಹೊರಗಡೆ ಹೋದ ಮೇಲೂ ನಿಮಗೆ ಪರಸ್ಪರ ಇಷ್ಟ ಆದ್ರೆ ಮುಂದುವರಿಯಿರಿ. ಒಂದು ವೇಳೆ ನಿಮಗೆ ಇಷ್ಟವಾದ್ರೆ ನಿಮ್ಮ ಮನೆಯಲ್ಲಿ ಒಪ್ಕೊಳ್ತಾರಾ ಎಂದು ಅರವಿಂದ್ ಗೆ ಶುಭಾ ಪ್ರಶ್ನಿಸಿದ್ದಾರೆ.
ಅದಕ್ಕೆ ಅರವಿಂದ್ ನನಗೆ ಏನೂ ಸಮಸ್ಯೆಯಾಗಲ್ಲ. ಅವರು ಇಂಡಸ್ಟ್ರಿಯಲ್ಲಿ ಇರ್ತಾಳೆ. ಹಾಗಾಗಿ ಅಂತಹ ವಿಚಾರಗಳು ಅವಳಿಗೆ ತೊಂದರೆ ಕೊಡಬಾರದು. ನಮ್ಮ ಮನೆಯಲ್ಲಿ ನನ್ನ ಇಷ್ಟವೇ ಕೊನೆಗೆ ಅಂತಿಮವಾಗುತ್ತದೆ. ಈಗ ಇಲ್ಲಿರುವವರ ಪೈಕಿ ನನಗೆ ಅವಳೇ ಇಷ್ಟ. ಅವಳ ಜೊತೆ ಹೊಂದಾಣಿಕೆ ಹೆಚ್ಚಿದೆ. ಆದರೆ ಹೊರಗಡೆ ಹೋದ ಮೇಲೂ ಅದೇ ರೀತಿ ಇರುತ್ತಾ ಹೇಳಕ್ಕಾಗಲ್ಲ. ಇಲ್ಲಿ ಸಂಬಂಧಗಳು ಬೇಗ ಹುಟ್ಟಿಕೊಳ್ಳುತ್ತದೆ, ಬೇಗ ಮುರಿಯುತ್ತದೆ ಎಂದು ಅರವಿಂದ್ ಸ್ಪಷ್ಟವಾಗಿ ಹೇಳಿದ್ದಾರೆ.