Publish Date: Mon, 22 Mar 2021 (09:00 IST)
Updated Date: Mon, 22 Mar 2021 (09:01 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 8 ರ ಮೂರನೇ ವಾರ ಬಿಗ್ ವಿಕೆಟ್ ಬಿದ್ದಿದೆ. ಈ ವಾರ ನಟಿ ಗೀತಾ ಭಾರತಿ ಭಟ್ ಎಲಿಮಿನೇಟ್ ಆಗಿದ್ದಾರೆ.
ಈ ವಾರರ ಒಟ್ಟು 9 ಸ್ಪರ್ಧಿಗಳು ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದರು.ಈ ಪೈಕಿ ವೀಕ್ಷಕರ ಕಡಿಮೆ ವೋಟ್ ಬಿದ್ದ ಕಾರಣ ಗುಂಡಮ್ಮ ಖ್ಯಾತಿಯ ಗೀತಾ ದೊಡ್ಮನೆಯಿಂದ ಹೊರಬಂದಿದ್ದಾರೆ.
ಅವರು ಎಲಿಮಿನೇಟ್ ಆಗಿರುವುದು ಸಹ ಸ್ಪರ್ಧಿಗಳಿಗೆ ಒಂದು ರೀತಿಯಲ್ಲಿ ಶಾಕ್ ಆಗಿದೆ. ಎಲ್ಲರೂ ಅಷ್ಟೊಂದು ಪ್ರದರ್ಶನ ನೀಡಿಲ್ಲ ಎಂಬ ಕಾರಣಕ್ಕೆ ಶಮಂತ್ ಬ್ರೋ ಗೌಡ ಹೊರಹೋಗಬಹುದು ಎಂದೇ ಲೆಕ್ಕಾಚಾರ ಹಾಕಿದ್ದರು. ಆದರೆ ಗೀತಾ ಹೊರನಡೆದಿರುವುದು ಎಲ್ಲರಿಗೂ ಶಾಕ್ ಉಂಟು ಮಾಡಿದೆ.