Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ 8: 9 ಸದಸ್ಯರು ಈ ವಾರ ಎಲಿಮಿನೇಟ್ ಆಗಲು ರೆಡಿ!

ಬಿಗ್ ಬಾಸ್ ಕನ್ನಡ 8
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಈ ವಾರ ಮನೆಯಿಂದ ಹೊರಹೋಗಲು ಬರೋಬ್ಬರಿ 9 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.


ಶಮಂತ್, ನಿಧಿ ಸುಬ್ಬಯ್ಯ, ಗೀತಾ ಭಾರತಿ ಭಟ್, ರಘು, ದಿವ್ಯಾ ಸುರೇಶ್, ದಿವ್ಯಾ ಉರುಡುಗ, ಅರವಿಂದ್, ವಿಶ್ವನಾಥ್, ಪ್ರಶಾಂತ್ ಸಂಬರಗಿ ಈ ವಾರ ನಾಮಿನೇಟ್ ಆದ ಸ್ಪರ್ಧಿಗಳು.

ಆ ಪೈಕಿ ಶಮಂತ್ ಮತ್ತು ನಿಧಿ ಅತೀ ಹೆಚ್ಚು ನಾಮಿನೇಷನ್ ಓಟ್ ಪಡೆದರು. ಕಳೆದ ವಾರದ ಟಾಸ್ಕ್ ನಲ್ಲಿ ನಿಧಿ ಕೊನೆಯ ಕ್ಷಣದಲ್ಲಿ ಆಟ ಕೈಬಿಟ್ಟಿದ್ದು, ಮನೆಯ ಸದಸ್ಯರ ಅಸಮಾಧಾನಕ್ಕೆ ಕಾರಣ. ಇನ್ನೊಂದೆಡೆ ಬ್ರೋ ಗೌಡ ಶಮಂತ್ ಮೇಲೂ ಸದಸ್ಯರಿಗೆ ಟಾಸ್ಕ್ ವಿಚಾರದಲ್ಲಿ ಅಸಮಾಧಾನವಿತ್ತು. ಆ ವಿಚಾರಕ್ಕೇ ಇಬ್ಬರಿಗೇ ಹೆಚ್ಚು ಮತಗಳು ಬಿದ್ದಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳಿಗೆ ಇದನ್ನು ಕಲಿಸುವುದನ್ನು ಮಾತ್ರ ಮರೀಬೇಡಿ ಎಂದ ರಾಧಿಕಾ ಪಂಡಿತ್