Publish Date: Mon, 15 Mar 2021 (09:37 IST)
Updated Date: Mon, 15 Mar 2021 (09:40 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಈ ವಾರ ನಿರ್ಮಲಾ ಸತ್ಯ ಮನೆಯಿಂದ ಎಲಿಮಿನೇಟ್ ಆಗಿ ಹೊರಬಿದ್ದಿದ್ದಾರೆ. ಆದರೆ ವೀಕ್ಷಕರ ಮನಸ್ಸಲ್ಲಿ ಅನುಮಾನ ಉಳಿದಿದೆ.
ಸಾಮಾನ್ಯವಾಗಿ ಎಲಿಮಿನೇಟ್ ಆದ ಬಳಿಕ ಸ್ಪರ್ಧಿಯನ್ನು ಕಿಚ್ಚ ಸುದೀಪ್ ತಮ್ಮ ವೇದಿಕೆಗೆ ಕರೆಸಿ ಮಾತನಾಡಿಸುತ್ತಾರೆ. ಆದರೆ ನಿರ್ಮಲಾ ಕಿಚ್ಚನ ವೇದಿಕೆಗೆ ಬರಲಿಲ್ಲ. ಇದರಿಂದ ನಿರ್ಮಲಾ ಬಗ್ಗೆ ವೀಕ್ಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ನಿರ್ಮಲಾ ಸೀಕ್ರೆಟ್ ರೂಂಗೆ ಹೋಗಿರಬಹುದು. ಅವರು ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಬಹುದು. ಹೀಗಾಗಿಯೇ ಅವರನ್ನು ವೇದಿಕೆಗೆ ಕರೆಸಿಲ್ಲ. ನೇರವಾಗಿ ಸೀಕ್ರೆಟ್ ರೂಂಗೆ ಕಳುಹಿಸಿರಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಕೇಳಿಬಂದಿದೆ. ಇದು ನಿಜವಾ ಎಂದು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.