Publish Date: Tue, 09 Mar 2021 (11:00 IST)
Updated Date: Tue, 09 Mar 2021 (11:02 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಎರಡನೇ ವಾರಕ್ಕೆ ಕಾಲಿಟ್ಟಿದ್ದು ಮೊದಲನೇ ವಾರವೇ ಟಿಕ್ ಟಾಕ್ ಸ್ಟಾರ್ ಧನುಶ್ರೀ ಗೌಡ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.
ನಿನ್ನೆ ಎರಡನೇ ವಾರಕ್ಕೆ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು ಬರೋಬ್ಬರಿ 8 ಸದಸ್ಯರು ನಾಮಿನೇಟ್ ಆಗಿದ್ದಾರೆ. ಮನೆಯ ಸದಸ್ಯರು ನಿನ್ನೆ ಬಿಗ್ ಬಾಸ್ ಅಣತಿಯಂತೆ ನಾಮಿನೇಷನ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ಅತೀ ಹೆಚ್ಚು ವೋಟ್ ಪಡೆದ 8 ಸದಸ್ಯರು ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ.
ಕಳೆದ ವಾರ ವಿಚಿತ್ರ ನಡವಳಿಕೆಗಳಿಂದ ಸುದ್ದಿಯಾಗಿದ್ದ ನಟಿ ನಿರ್ಮಲಾ ಸತ್ಯ ಈ ವಾರವೂ ನಾಮಿನೇಟ್ ಆಗಿದ್ದಾರೆ. ಅವರಲ್ಲದೆ, ಪ್ರಶಾಂತ್ ಸಂಬರಗಿ, ಗೀತಾ ಭಾರತಿ ಭಟ್, ನಿಧಿ ಸುಬ್ಬಯ್ಯ, ವಿಶ್ವನಾಥ್, ಚಂದ್ರಕಲಾ ಮೋಹನ್ ರನ್ನು ಮನೆಯ ಸದಸ್ಯರು ನಾಮಿನೇಟ್ ಮಾಡಿದ್ದಾರೆ. ಇವರಲ್ಲದೆ, ಮನೆಯ ಕ್ಯಾಪ್ಟನ್ ಬ್ರೋ ಗೌಡ ಶುಭ ಪೂಂಜಾರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಹೀಗಾಗಿ ಇವಿಷ್ಟೂ ಸ್ಪರ್ಧಿಗಳ ಮೇಲೆ ತೂಗುಗತ್ತಿ ನೇತಾಡುತ್ತಿದೆ.