Publish Date: Fri, 05 Mar 2021 (11:33 IST)
Updated Date: Fri, 05 Mar 2021 (11:36 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಎಂಟನೇ ಆವೃತ್ತಿ ಆರಂಭವಾಗಿ ವಾರ ಕಳೆದಿದೆಯಷ್ಟೇ. ಆದರೆ ಆಗಲೇ ಸ್ಪರ್ಧಿಗಳ ನಡುವೆ ಅಸಮಾಧಾನಗಳು ಹೊಗೆಯಾಡುತ್ತಿವೆ.
ಅದರಲ್ಲೂ ತಾವಾಗಿಯೇ ನಾಮಿನೇಷನ್ ಮೈಮೇಲೆಳದುಕೊಂಡ ನಿರ್ಮಲಾ ಮೇಲೆ ಸಹಸ್ಪರ್ಧಿಗಳು ಅಸಮಾಧಾನ ಹೊರಹಾಕುತ್ತಿದ್ದಾರೆ. ಒಬ್ಬರೇ ಇರ್ತಾರೆ, ಜೊತೆಯಲ್ಲಿ ಕೂತು ಊಟ ಮಾಡಲ್ಲ, ಎಲ್ಲರೂ ತಮ್ಮನ್ನು ಕರೆಯುವ ಹಾಗೆ ಬೇಕೆಂದೇ ಮಾಡಿಕೊಳ್ಳುತ್ತಾರೆ ಇತ್ಯಾದಿ ಅವರ ಮೇಲಿನ ಆರೋಪಗಳು.
ಸಾಲದೆಂಬಂತೆ ಇದೀಗ ನಾಮಿನೇಷನ್ ಪ್ರಕ್ರಿಯೆ ಹತ್ತಿರಬರುತ್ತಿದ್ದಂತೇ ರಾತ್ರಿ ವೇಳೆ ಮೇಕಪ್ ಹಾಕಿಕೊಂಡು ಅಜ್ಜಿ ಸೀರೆ ಧರಿಸಿಕೊಂಡು ಒಬ್ಬೊಬ್ಬರೇ ಮಾತನಾಡುತ್ತಿರುವುದು ಇತರರಿಗೆ ಭಯವುಂಟು ಮಾಡಿದೆ. ಕ್ಯಾಪ್ಟನ್ ಬ್ರೋ ಗೌಡ, ನಿರ್ಮಲಾ ನೋಡಿ ತಲೆಕೆಡುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ಇದೆಲ್ಲಾ ಅವರು ನಾಮಿನೇಷನ್ ನಿಂದ ಪಾರಾಗಲು ಮಾಡುತ್ತಿರುವ ತಂತ್ರವಾ? ಎಲ್ಲರ ಏಕಾಗ್ರತೆಯನ್ನು ತನ್ನೆಡೆಗೆ ಸೆಳೆದುಕೊಳ್ಳುವ ಪ್ರಯತ್ನವಾ ಎಂಬ ಅನುಮಾನ ಮೂಡುತ್ತಿದೆ. ಅವರ ರಾ...ರಾ.. ಲುಕ್ ಇತರ ಸ್ಪರ್ಧಿಗಳಲ್ಲಿ ಆತಂಕವುಂಟು ಮಾಡಿರುವುದಂತೂ ನಿಜ.