Select Your Language

Notifications

webdunia
webdunia
webdunia
webdunia

ರಿಷಬ್ ‘ಹೀರೋ’ ಸಿನಿಮಾಗೆ ಡಿ ಬಾಸ್ ದರ್ಶನ್ ಸಾಥ್

ರಿಷಬ್ ‘ಹೀರೋ’ ಸಿನಿಮಾಗೆ ಡಿ ಬಾಸ್ ದರ್ಶನ್ ಸಾಥ್
ಬೆಂಗಳೂರು , ಶುಕ್ರವಾರ, 5 ಮಾರ್ಚ್ 2021 (11:10 IST)
ಬೆಂಗಳೂರು: ಕ್ರಿಯಾತ್ಮಕ ನಿರ್ದೇಶಕ ರಿಷಬ್ ಶೆಟ್ಟಿ ನಟಿಸಿರುವ ‘ಹೀರೋ’ ಸಿನಿಮಾ ಇಂದಿನಿಂದ ಥಿಯೇಟರ್ ನಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾಗೆ ಡಿ ಬಾಸ್ ದರ್ಶನ್ ಗೆ ಸಾಥ್ ನೀಡಿದ್ದಾರೆ.


ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಸಾಮಾಜಿಕ ಜಾಲತಾಣ ಪೇಜ್ ನಲ್ಲಿ ಹೀರೋ ಸಿನಿಮಾ ವೀಕ್ಷಿಸುವಂತೆ ಅಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ. ‘ಟ್ರೈಲರ್ ಮೂಲಕವೇ ಕುತೂಹಲ ಕೆರಳಿಸಿರುವ ನಮ್ಮ ರಿಷಬ್ ಶೆಟ್ಟಿ ಅಭಿನಯದ ‘ಹೀರೋ’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಚಿತ್ರತಂಡಕ್ಕೆ ಶುಭವಾಗಲಿ. ಚಿತ್ರಮಂದಿರದಲ್ಲೇ ಚಿತ್ರ ನೋಡಿ ಹಾರೈಸಿ’ ಎಂದು ದರ್ಶನ್ ಕರೆಕೊಟ್ಟಿದ್ದಾರೆ.

ಈ ಸಿನಿಮಾ ಕೇವಲ ರಾಜ್ಯದಾದ್ಯಂತ ಅಲ್ಲ. ಮುಂಬೈ, ಡೆಲ್ಲಿ, ಗೋವಾ, ಡೆಲ್ಲಿ ಸೇರಿದಂತೆ ದೇಶದಾದ್ಯಂತ ಬಿಡುಗಡೆಯಾಗಿದೆ. ಲಾಕ್ ಡೌನ್ ವೇಳೆ ಸೀಮಿತ ತಂಡದೊಂದಿಗೆ ನಿರ್ಮಿಸಿದ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮ್ಮನಾಗ್ತಿದ್ದಾರೆ ಮಧುರ ಕಂಠದ ಗಾಯಕಿ ಶ್ರೇಯಾ ಘೋಷಾಲ್