Publish Date: Fri, 05 Mar 2021 (10:07 IST)
Updated Date: Fri, 05 Mar 2021 (10:08 IST)
ಬೆಂಗಳೂರು: ಮುಂದಿನ ವಾರ ಡಿ ಬಾಸ್ ಅಭಿಮಾನಿಗಳಿಗೆ ವಿಶೇಷ. ಬಹುನಿರೀಕ್ಷಿತ ರಾಬರ್ಟ್ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.
ದರ್ಶನ್ ಅಭಿಮಾನಿಗಳು ಬಹಳ ಕಾಲದಿಂದ ಕಾಯುತ್ತಿದ್ದ ಸಿನಿಮಾವಿದು. ಹೀಗಾಗಿ ಅಭಿಮಾನಿಗಳು ಈ ಸಿನಿಮಾವನ್ನು ಭರ್ಜರಿಯಾಗಿ ಎದಿರುಗೊಳ್ಳಲು ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ.
ಮಾರ್ಚ್ 11 ರಂದು ಜೆಪಿ ನಗರದ ಸಿದ್ದೇಶ್ವರ ಥಿಯೇಟರ್ ಮುಂದೆ ದರ್ಶನ್ ಅವರ ಡಿಫರೆಂಟ್ ಗೆಟಪ್ ಗಳಲ್ಲಿರುವ ಬೃಹತ್ ಕಟೌಟ್ ಗಳನ್ನು ಹಾಕಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ವಿವಿಧ ರೀತಿಯ ಕಟೌಟ್ ಗಳು ರೆಡಿಯಾಗಿವೆ. ರಾಬರ್ಟ್ ಬಿಡುಗಡೆ ದಿನ ಪ್ರೇಕ್ಷಕರಿಗೆ ಈ ವೈವಿದ್ಯಮಯ ಕಟೌಟ್ ಗಳೂ ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ.