Publish Date: Tue, 02 Mar 2021 (10:51 IST)
Updated Date: Tue, 02 Mar 2021 (10:53 IST)
ಬೆಂಗಳೂರು: ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೀರೋ ಸಿನಿಮಾ ಸೆಟ್ ನಲ್ಲಿ ನಡೆದಿದ್ದ ಅಗ್ನಿ ಅವಘಡದ ಬಗ್ಗೆ ಹೇಳಿಕೊಂಡು, ಈಗ ತಾವೇ ವಿವಾದ ಮೈಮೇಲೆಳೆದುಕೊಂಡಿದ್ದಾರೆ.
ಲಾಕ್ ಡೌನ್ ಸಮಯದಲ್ಲಿ ಕಳೆದ ಜುಲೈನಲ್ಲಿ ಹೀರೋ ಸಿನಿಮಾದ ಆಕ್ಷನ್ ಸೀಕ್ವೆನ್ಸ್ ಒಂದನ್ನು ಕಾಡೊಂದರಲ್ಲಿ ಚಿತ್ರೀಕರಿಸಲಾಗಿತ್ತು. ಸೆಟ್ ನಲ್ಲಿ ಪೆಟ್ರೋಲ್ ಬಾಂಬ್ ಬಳಸಿ ಚಿತ್ರೀಕರಣ ಮಾಡುವಾಗ ತಮ್ಮ ಹಿಂಭಾಗಕ್ಕೆ ಬೆಂಕಿ ತಗುಲಿತ್ತು ಎಂದು ರಿಷಬ್ ಹೇಳಿಕೊಂಡಿದ್ದಾರೆ. ಆದರೆ ರಿಷಬ್ ಈ ರೀತಿ ಹೇಳಿಕೆ ನೀಡಿದ ಬೆನ್ನಲ್ಲೇ ಹಲವರು ಸಾಮಾಜಿಕ ಜಾಲತಾಣದಲ್ಲಿ ಇವರಿಗೆ ಪೆಟ್ರೋಲ್ ಬಾಂಬ್ ಬಳಸಿ ಅಪಾಯಕಾರಿ ಚಿತ್ರೀಕರಣ ನಡೆಸಲು ಅನುಮತಿ ನೀಡಿದವರು ಯಾರು ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಇದೆಲ್ಲಾ ಪ್ರಚಾರದ ಗಿಮಿಕ್ ಎಂದು ಟೀಕಿಸಿದ್ದಾರೆ.