Publish Date: Tue, 02 Mar 2021 (09:58 IST)
Updated Date: Tue, 02 Mar 2021 (10:01 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಈ ಬಾರಿ ಬಿಗ್ ಬಾಸ್ ಧ್ವನಿ ಯಾಕೋ ವೀಕ್ಷಕರಿಗೆ ಇಷ್ಟವಾಗಿಲ್ಲ. ಸಾಮಾಜಿಕ ಜಾಲತಾಣದ ಮೂಲಕ ಬಿಗ್ ಬಾಸ್ ಧ್ವನಿ ಬಗ್ಗೆ ಅಪಸ್ವರವೆತ್ತಿದ್ದಾರೆ.
ಯಾವತ್ತಿನಂತೆ ಬಿಗ್ ಬಾಸ್ ಧ್ವನಿ ಚೆನ್ನಾಗಿಲ್ಲ. ಸ್ಪಷ್ಟವಾಗಿ ಕೇಳುತ್ತಿಲ್ಲ ಎಂಬಿತ್ಯಾದಿ ಕಾಮೆಂಟ್ ಗಳನ್ನು ಮಾಡುತ್ತಿದ್ದು, ಮೊದಲಿನಂತೆ ಬದಲಾಯಿಸಿ ಎಂದು ಆಗ್ರಹಿಸುತ್ತಿದ್ದಾರೆ. ಇನ್ನು, ಮೊದಲ ದಿನವೇ ತಮ್ಮ ತಮಾಷೆಯ ಮಾತುಗಳಿಂದ ಮನರಂಜನೆ ಒದಗಿಸಿದ ನಟಿ ಶುಭ ಪೂಂಜಾ ಬಗ್ಗೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.