Publish Date: Mon, 08 Mar 2021 (09:05 IST)
Updated Date: Mon, 08 Mar 2021 (09:07 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಒಂದು ವಾರ ಮುಗಿಸಿದೆ. ಒಂದು ವಾರದಲ್ಲಿ ಇದುವರೆಗೆ ವೀಕ್ಷಕರಿಗೆ ಅತೀ ಹೆಚ್ಚು ಇಷ್ಟವಾದ ಸ್ಪರ್ಧಿಗಳು ಯಾರು ಗೊತ್ತಾ?
ಮೊದಲನೇ ವಾರದಲ್ಲಿ ತಮ್ಮ ವರ್ತನೆ, ತಮಾಷೆ, ಆಟದಿಂದಾಗಿ ಹಲವು ಸ್ಪರ್ಧಿಗಳು ವೀಕ್ಷಕರಿಗೆ ಇಷ್ಟವಾಗಿದ್ದಾರೆ. ಅದರಲ್ಲೂ ಶುಭ ಪೂಂಜಾ, ಮಂಜು ಪಾವಗಡ ಹಾಸ್ಯ ಮಾಡುವ ಮೂಲಕ ವೀಕ್ಷಕರಿಗೆ ಪಕ್ಕಾ ಎಂಟರ್ ಟೈನ್ ಮೆಂಟ್ ಕೊಟ್ಟಿದ್ದಾರೆ. ಇನ್ನು, ವೈಷ್ಣವಿ ಗೌಡ ತಮ್ಮ ಗುಳಿಕೆನ್ನೆಯ ನಗುವಿನಿಂದ ಸೈಲೆಂಟ್ ಆಗಿಯೇ ಮನೆಯವರ ಮನ ಗೆದ್ದಿದ್ದಾರೆ.
ರಾಜೀವ್ ಆಟದ ಮೂಲಕ, ಪ್ರಾಮಾಣಿಕತೆ ಮೂಲಕ ಜನರಿಗೆ ಇಷ್ಟವಾಗಿದ್ದಾರೆ. ಹಿರಿಯ ಶಂಕರ್ ಅಶ್ವತ್ಥ್ ಬಗ್ಗೆ ವೀಕ್ಷಕರಲ್ಲಿ ಗೌರವವಿದೆ. ಆದರೆ ಪ್ರಶಾಂತ್ ಸಂಬರಗಿ ಕೊಂಚ ವಿವಾದ ಹುಟ್ಟುಹಾಕುವ ಸ್ಪರ್ಧಿ ಎನಿಸಿದ್ದರೆ, ದಿವ್ಯಾ ಸುರೇಶ್ ಬೇಕೆಂದೇ ಮಂಜುಗೆ ಸೈಟ್ ಹೊಡೆದು ಡವ್ ಮಾಡ್ತಿದ್ದಾರೆ ಎಂದು ವೀಕ್ಷಕರು ಹೇಳುತ್ತಿದ್ದಾರೆ. ಉಳಿದ ಸ್ಪರ್ಧಿಗಳು ಇನ್ನಷ್ಟು ಬಿಗ್ ಬಾಸ್ ಮನೆಯಲ್ಲಿ ಮಿಂಚಬೇಕಿದೆ.