Publish Date: Mon, 22 Mar 2021 (09:10 IST)
Updated Date: Mon, 22 Mar 2021 (09:11 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳು ಮೊಬೈಲ್ ಬಳಸ್ತಿದ್ದಾರಾ? ಹೀಗೊಂದು ಅನುಮಾನ ಮೂಡಲು ಕಾರಣ ಸ್ಪರ್ಧಿಗಳ ಸೋಷಿಯಲ್ ಮೀಡಿಯಾ ಆಕ್ಟಿವ್ ಆಗಿರುವುದು.
ಗೀತಾ ಭಾರತಿ ಭಟ್, ವೈಷ್ಣವಿ ಗೌಡ, ಮಂಜು, ರಾಜೀವ್ ಸೇರಿದಂತೆ ಎಲ್ಲಾ ಸ್ಪರ್ಧಿಗಳ ಇನ್ ಸ್ಟಾಗ್ರಾಂ, ಫೇಸ್ ಬುಕ್ ಖಾತೆಗಳು ಸಕ್ರಿಯವಾಗಿವೆ. ಅವರು ಬಿಗ್ ಬಾಸ್ ಮನೆಗೆ ಹೋದರೂ ವೋಟ್ ಹಾಕಿ ನಾಮಿಷೇನ್ ನಿಂದ ಬಚಾವ್ ಮಾಡಿದ್ದಕ್ಕೆ ಧನ್ಯವಾದಗಳು ಎಂದೆಲ್ಲಾ ವಿಡಿಯೋ ಅಪ್ ಲೋಡ್ ಮಾಡುತ್ತಿರುವುದು ನೋಡಿ ವೀಕ್ಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಆದರೆ ಈ ವಾರ ಹೊರಬಿದ್ದಿರುವ ಗೀತಾ ಭಾರತಿ ಭಟ್ ಅವರ ಸೋಷಿಯಲ್ ಮೀಡಿಯಾ ಈ ಮೊದಲು ಈ ವಿಚಾರದ ಬಗ್ಗೆ ಪೇಜ್ ಸ್ಪಷ್ಟನೆ ನೀಡಿತ್ತು. ಈ ವಿಡಿಯೋವನ್ನು ಅವರು ಬಿಗ್ ಬಾಸ್ ಗಾಗಿ ಕ್ವಾರಂಟೈನ್ ಆಗಿದ್ದಾಗ ಚಿತ್ರೀಕರಿಸಲಾಗಿತ್ತು ಎಂದಿತ್ತು. ಈ ಎಲ್ಲಾ ಸೆಲೆಬ್ರಿಟಿಗಳ ಪೇಜ್ ಗಳನ್ನು ಈಗ ಅವರ ತಂಡ ನಿರ್ವಹಿಸುತ್ತಿದೆ. ಈ ಪೇಜ್ ಗಳ ಮೂಲಕ ಅವರನ್ನು ಪ್ರಮೋಟ್ ಮಾಡುವ ಕೆಲಸ ಮಾಡುತ್ತಿದೆ ಅಷ್ಟೇ.