Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್-ದರ್ಶನ್ ಮತ್ತೆ ಒಂದಾಗಲು ಫ್ಯಾನ್ಸ್ ಮಾಡಿದ ಕೆಲಸ ನೋಡಿ!

ಕಿಚ್ಚ ಸುದೀಪ್-ದರ್ಶನ್ ಮತ್ತೆ ಒಂದಾಗಲು ಫ್ಯಾನ್ಸ್ ಮಾಡಿದ ಕೆಲಸ ನೋಡಿ!
ಬೆಂಗಳೂರು , ಗುರುವಾರ, 25 ಮಾರ್ಚ್ 2021 (10:20 IST)
ಬೆಂಗಳೂರು: ಒಂದು ಕಾಲದ ಕುಚಿಕು ಗೆಳೆಯರಾಗಿದ್ದ ಕಿಚ್ಚ ಸುದೀಪ್ ಮತ್ತು ದರ್ಶನ್ ಈಗ ದೂರವಾಗಿ ನಾಲ್ಕು ವರ್ಷಗಳೇ ಕಳೆದಿವೆ. ಆದರೆ ಇಬ್ಬರೂ ದಿಗ್ಗಜ ನಟರು ಮತ್ತೆ ಒಂದಾಗಬೇಕೆಂದು ಬಯಸುವ ಎಷ್ಟೋ ಅಭಿಮಾನಿಗಳಿದ್ದಾರೆ.


ಇಂತಹ ಅಭಿಮಾನಿಗಳು ಈಗ ಕಿಚ್ಚ-ದಚ್ಚು ಒಂದಾಗಲೆಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವೊಂದನ್ನು ಆರಂಭಿಸಿದ್ದಾರೆ. #DbossKicchaCometogether ಎಂಬ ಹ್ಯಾಶ್ ಟ್ಯಾಗ್ ಜೊತೆಗೆ ಇಬ್ಬರೂ ಹಿಂದೆ ಜೊತೆಯಾಗಿ ತೆಗೆಸಿಕೊಂಡಿದ್ದ ಫೋಟೋವನ್ನು ಟ್ಯಾಗ್ ಮಾಡಿ ಅಭಿಯಾನ ಆರಂಭಿಸಿದ್ದಾರೆ.

ಇಬ್ಬರ ನಡುವಿನ ವೈಮನಸ್ಯ ಕಾರಣದಿಂದ ಇಬ್ಬರ ಅಭಿಮಾನಿಗಳೂ ಆಗಾಗ ಕಿತ್ತಾಡುತ್ತಾರೆ. ಇವರಿಬ್ಬರ ಕಿತ್ತಾಟದ ಲಾಭವನ್ನು ಎಷ್ಟೋ ಜನ ತಮ್ಮ ಸ್ವಯಂ ಲಾಭಕ್ಕೆ ಬಳಸುತ್ತಿದ್ದಾರೆ. ಹೀಗಾಗಿ ದರ್ಶನ್ ಮತ್ತು ಸುದೀಪ್ ಒಂದಾಗಬೇಕು ಎಂದು ಕೆಲವು ಅಭಿಮಾನಿಗಳು ಬಯಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪವನ್ ಕಲ್ಯಾಣ್ ‘ವಕೀಲ್ ಸಾಬ್’ ಚಿತ್ರದ ಟ್ರೈಲರ್ ಬಿಡುಗಡೆಯ ದಿನಾಂಕ ನಿಗದಿ