Select Your Language

Notifications

webdunia
webdunia
webdunia
webdunia

ಸೂಪರ್ ಸ್ಟಾರ್ ಮೋಹನ್ ಲಾಲ್ ಗೆ ನೀವೇ ನಮ್ಮ ಸ್ಪೂರ್ತಿ ಎಂದ ಕಿಚ್ಚ ಸುದೀಪ್

ಸೂಪರ್ ಸ್ಟಾರ್ ಮೋಹನ್ ಲಾಲ್ ಗೆ ನೀವೇ ನಮ್ಮ ಸ್ಪೂರ್ತಿ ಎಂದ ಕಿಚ್ಚ ಸುದೀಪ್
ಬೆಂಗಳೂರು , ಗುರುವಾರ, 25 ಮಾರ್ಚ್ 2021 (09:43 IST)
ಬೆಂಗಳೂರು: ಕಿಚ್ಚ ಸುದೀಪ್ ಗೆ ಪರಭಾಷೆಯ ನಟರೊಂದಿಗೂ ಉತ್ತಮ ಸ್ನೇಹವಿದೆ. ಇದೀಗ ಸುದೀಪ್ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಬಗ್ಗೆ ನೀವೇ ನನ್ನ ಸ್ಪೂರ್ತಿ ಎಂದು ಮನಃತುಂಬಿ ಹಾರೈಸಿದ್ದಾರೆ.


ಹಲವು ಭಾಷೆಗಳ ನೂರಾರು ಸಿನಿಮಾಗಳಲ್ಲಿ ಅಭಿನಯಿಸಿರುವ ಮೋಹನ್ ಲಾಲ್ ಇದೇ ಮೊದಲ ಬಾರಿಗೆ ನಿರ್ದೇಶನಕ್ಕಿಳಿಯುತ್ತಿದ್ದಾರೆ. ‘ಬರೋಝ್’ ಎನ್ನುವ ಸಿನಿಮಾ ಮೂಲಕ ಮೋಹನ್ ಲಾಲ್ ನಿರ್ದೇಶಕನ ಕ್ಯಾಪ್ ತೊಡಲಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಸಿನಿಮಾವಾಗಿದ್ದು, ನಿನ್ನೆಯಷ್ಟೇ ಅದರ ಮುಹೂರ್ತ ನೆರವೇರಿದೆ.

ಈ ಸಿನಿಮಾಗೆ ಶುಭ ಹಾರೈಸಿದ ಕಿಚ್ಚ ಸುದೀಪ್ ‘ಸೂಪರ್. ನಿಮಗೆ ಶುಭ ಹಾರೈಕೆಗಳು ಮೋಹನ್ ಲಾಲ್ ಸರ್. ಇದನ್ನು ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದೇನೆ. ನೀವು ಪ್ರತಿಯೊಬ್ಬ ನಟನ ಸ್ಪೂರ್ತಿ. ನಿಮಗಾಗಿ ಕತೆ ಬರೆಯುವ ಪ್ರತಿಯೊಬ್ಬ ನಿರ್ದೇಶಕರೂ ಈ ಸಿನಿಮಾಗಾಗಿ ಎದಿರು ನೋಡಲಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ಸ್ಟಾರ್ ಗಳ ಮೇಲೆ ಸರ್ಕಾರದ ಕೆಂಗಣ್ಣು?