Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ಸ್ಟಾರ್ ಗಳ ಮೇಲೆ ಸರ್ಕಾರದ ಕೆಂಗಣ್ಣು?

ಸ್ಯಾಂಡಲ್ ವುಡ್ ಸ್ಟಾರ್ ಗಳ ಮೇಲೆ ಸರ್ಕಾರದ ಕೆಂಗಣ್ಣು?
ಬೆಂಗಳೂರು , ಗುರುವಾರ, 25 ಮಾರ್ಚ್ 2021 (09:19 IST)
ಬೆಂಗಳೂರು: ಕೊರೋನಾ ದಿನೇ ದಿನೇ ಹೆಚ್ಚುತ್ತಿದೆ. ಇಂತಹ ಸಮಯದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ಗಳು ತಮ್ಮ ಸಿನಿಮಾ ಪ್ರಚಾರಕ್ಕೆಂದು ಊರೂರಿಗೆ ತಿರುಗಿ ಜನರನ್ನು ಸೇರಿಸುತ್ತಿರುವುದು ಸರಿಯೇ ಎಂಬ ಪ್ರಶ್ನೆ ಮೂಡಿದೆ.

 

ಇದರ ಬಗ್ಗೆ ಆರೋಗ್ಯ ಸಚಿವ ಡಾ. ಸುಧಾಕರ್ ಈಗಾಗಲೇ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇತ್ತೀಚೆಗೆ ರಾಬರ್ಟ್ ಸಿನಿಮಾ ಈವೆಂಟ್, ಯುವರತ್ನ ಸಿನಿಮಾದ ಪ್ರಚಾರ ಕಾರ್ಯಕ್ರಮಗಳಲ್ಲಿ ಜನ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ ನೂಕು ನುಗ್ಗಲು ಉಂಟುಮಾಡಿದ್ದರು.

ಈ ವೇಳೆ ಸಾಮಾಜಿಕ ಅಂತರವೂ ಇಲ್ಲ, ಮಾಸ್ಕ್ ಕೂಡಾ ಧರಿಸದೇ ಎಷ್ಟೋ ಮಂದಿ ಸೇರಿರುವುದು ಸರ್ಕಾರದ ಕಣ್ಣು ಕೆಂಪಗಾಗಿಸಿ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಸಚಿವರು ಸ್ಯಾಂಡಲ್ ವುಡ್ ನಟರು ತಮ್ಮ ಅಭಿಮಾನಿಗಳು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೇಳಬೇಕು ಎಂದಿದ್ದರು.

ಇನ್ನು ಇದೇ ತಿಂಗಳ ಅಂತ್ಯಕ್ಕೆ ರಾಬರ್ಟ್ ಸಿನಿಮಾ ತಂಡವೂ ವಿಜಯೋತ್ಸವ ಆಚರಿಸುತ್ತಿದೆ. ಈ ವೇಳೆಯೂ ಇಂತಹದ್ದೇ ಜನರ ಜಾತ್ರೆ ಕಂಡುಬರುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಸಚಿವರು ಈಗಲೇ ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನಪ್ರಿಯ ನಟ ವೆಂಕಟೇಶ್ ಹೃದಯಾಘಾತದಿಂದ ನಿಧನ