ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಪ್ರಕರಣ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ಆರೋಗ್ಯ ಸಚಿವ ಡಾ. ಸುಧಾಕರ್ ಸ್ಯಾಂಡಲ್ ವುಡ್ ನಟರ ನೆರವು ಕೇಳಿದ್ದಾರೆ.
									
			
			 
 			
 
 			
			                     
							
							
			        							
								
																	 
									
										
								
																	
ಕೊರೋನಾ ನಿಯಂತ್ರಣಕ್ಕೆ ಚಲನಚಿತ್ರ ತಾರೆಯರೂ ಸಹಕಾರ ನೀಡಬೇಕು ಎಂದು ಕೋರುತ್ತೇನೆ. ಸ್ಟಾರ್ ನಟರ ಮಾತನ್ನು ಅಭಿಮಾನಿಗಳು ಕೇಳುತ್ತಾರೆ. ಹೀಗಾಗಿ ಅವರು ತಾವೂ ಮಾಸ್ಕ್ ಧರಿಸಿ, ಅಭಿಮಾನಿಗಳಿಗೂ ಮಾಸ್ಕ್ ಧರಿಸಿ ಎಚ್ಚರವಾಗಿರಲು ಕರೆ ನೀಡಲಿ ಎಂದು ಸುಧಾಕರ್ ಮನವಿ ಮಾಡಿದ್ದಾರೆ.
									
										
								
																	ಯುವರತ್ನ, ರಾಬರ್ಟ್ ಸಿನಿಮಾ ತಂಡಗಳ ಸಿನಿಮಾ ಪ್ರಚಾರದ ಕಾರ್ಯಕ್ರಮಗಳ ಬೆನ್ನಲ್ಲೇ ಸಚಿವ ಸುಧಾಕರ್ ಇಂತಹದ್ದೊಂದು ಮನವಿ ಮಾಡಿರುವುದು ಉಲ್ಲೇಖನೀಯ. ಸ್ಟಾರ್ ನಟರನ್ನು ನೋಡಲು ಸಾವಿರಾರು ಜನ ಸೇರುತ್ತಾರೆ, ಸಾಮಾಜಿಕ ಅಂತರ ಮರೆತು ನೂಕು ನುಗ್ಗಲು ನಡೆಸುತ್ತಿದ್ದಾರೆ. ಇದರ ಬಗ್ಗೆ ಸುಧಾಕರ್ ಪರೋಕ್ಷವಾಗಿ ಈ ಹೇಳಿಕೆ ನೀಡಿರಬಹುದು ಎನ್ನಲಾಗಿದೆ.