Select Your Language

Notifications

webdunia
webdunia
webdunia
webdunia

ತಲೈವಿ ಟ್ರೇಲರ್ ಕಂಡು ಪ್ರತಿಕ್ರಿಯಿಸಿದ ಆರ್ ಜಿ ವಿಗೆ ಕಂಗನಾ ಹೇಳಿದ್ದೇನು ಗೊತ್ತಾ?

ತಲೈವಿ ಟ್ರೇಲರ್ ಕಂಡು ಪ್ರತಿಕ್ರಿಯಿಸಿದ ಆರ್ ಜಿ ವಿಗೆ ಕಂಗನಾ ಹೇಳಿದ್ದೇನು ಗೊತ್ತಾ?
ಹೈದರಾಬಾದ್ , ಗುರುವಾರ, 25 ಮಾರ್ಚ್ 2021 (13:02 IST)
ಹೈದರಾಬಾದ್ : ಬಾಲಿವುಡ್ ನಟಿ ಕಂಗನಾ ರನೌತ್ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಅಂದು ಅವರ ಅಭಿನಯನದ ತಮಿಳುನಾಡಿನ ಸಿಎಂ ಜಯಲಲಿತಾ ಅವರ ಜೀವನಚರಿತ್ರೆಯ ಚಿತ್ರ ‘ತಲೈವಿ’ ಟ್ರೇಲರ್ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಟ್ರೈಲರ್ ಅನ್ನು ನೋಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು  ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತು ಕಂಗನಾ ಮಧ್ಯೆ ಕೆಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯವಿದೆ. ಆದರೆ ರಾಮ್ ಗೋಪಾಲ್ ಅವರು ತಲೈವಿ ಟ್ರೇಲರ್ ನೋಡಿ ಸ್ವರ್ಗದಲ್ಲಿರುವ ಜಯಲಲಿತಾ ಅವರು ರೋಮಾಂಚನಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಕಂಗನಾ, ನಾನು ನಿಮ್ಮೊಂದಿಗೆ ಯಾವುದರ ಬಗ್ಗೆ ಭಿನ್ನಾಭಿಪ್ರಾಯ ಹೊಂದಿಲ್ಲ. ನಾನು ನಿಮ್ಮನ್ನು ಇಷ್ಟಪಡುತ್ತೇನೆ, ಗೌರವಿಸುತ್ತೇನೆ. ನಿಮ್ಮ ಅಹಂಕಾರದ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಅಪರಿಚಿಟುಡು’ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಲು ಹೊರಟ ನಿರ್ದೇಶಕ ಶಂಕರ್