Select Your Language

Notifications

webdunia
webdunia
webdunia
webdunia

ಮಾರ್ಚ್ ನಲ್ಲಿ ಬಿಡುಗಡೆಯಾಗುತ್ತಿರುವ ಬಿಗ್ ಥ್ರೀ ಸಿನಿಮಾಗಳ ಲಿಸ್ಟ್

ಮಾರ್ಚ್ ನಲ್ಲಿ ಬಿಡುಗಡೆಯಾಗುತ್ತಿರುವ ಬಿಗ್ ಥ್ರೀ ಸಿನಿಮಾಗಳ ಲಿಸ್ಟ್
ಬೆಂಗಳೂರು , ಗುರುವಾರ, 3 ಫೆಬ್ರವರಿ 2022 (11:50 IST)
ಬೆಂಗಳೂರು: ಏಪ್ರಿಲ್ ನಂತೇ ಮಾರ್ಚ್ ನಲ್ಲೂ ಬಿಗ್ ಸಿನಿಮಾಗಳ ರಿಲೀಸ್ ಕನ್ ಫರ್ಮ್ ಆಗಿದೆ. ಅದರಲ್ಲೂ ವಿಶೇಷವಾಗಿ ಮೂರು ಸಿನಿಮಾಗಳು ಬಿಡುಗಡೆಯಾಗುವುದು ಪಕ್ಕಾ ಆಗಿದೆ.

ಮಾರ್ಚ್ 11 ರಂದು ಪ್ರಭಾಸ್-ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ ಸಿನಿಮಾ ಬಿಡುಗಡೆಯಾಗುವುದು ಕನ್ ಫರ್ಮ್ ಆಗಿದೆ. ಈ ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ ಬಗ್ಗೆ ಪ್ರಭಾಸ್ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಯಿದೆ.

ಮಾರ್ಚ್ 17 ರಂದು ಪುನೀತ್ ರಾಜ್ ಕುಮಾರ್ ಕೊನೆಯ ಸಿನಿಮಾ ಜೇಮ್ಸ್ ಬಿಡುಗಡೆಯಾಗಲಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಘೋಷಣೆ ನೀಡಿಲ್ಲ. ಹಾಗಿದ್ದರೂ ಪುನೀತ್ ಬರ್ತ್ ಡೇ ದಿನವೇ ಸಿನಿಮಾ ಬಿಡುಗಡೆಯಾಗುವುದು ಬಹುತೇಕ ಪಕ್ಕಾ ಆಗಿದೆ.

ಮಾರ್ಚ್ 25 ರಂದು ತ್ರಿಬಲ್ ಆರ್ ಸಿನಿಮಾ ಬಿಡುಗಡೆ ಘೋಷಣೆಯಾಗಿದೆ. ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ಜೂ.ಎನ್ ಟಿಆರ್, ರಾಮ್ ಚರಣ್ ತೇಜ್ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಬರೆಯುವುದು ಪಕ್ಕಾ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿರಿಯ ನಟ ಅಶೋಕ್ ರಾವ್ ಕ್ಯಾನ್ಸರ್ ನಿಂದ ನಿಧನ