ಬೆಂಗಳೂರು: ಪುನೀತ್ ರಾಜ್ ಕುಮಾರ್ ಕೊನೆಯದಾಗಿ ನಟಿಸಿರುವ ಜೇಮ್ಸ್ ಸಿನಿಮಾಗೆ ಶಿವರಾಜ್ ಕುಮಾರ್ ಧ್ವನಿ ನೀಡಿದ್ದಾರೆ.
ಪುನೀತ್ ಚಿತ್ರೀಕರಣ ಮುಗಿಸಿದ್ದರು. ಆದರೆ ಡಬ್ಬಿಂಗ್ ಮಾಡಲಾಗಿರಲಿಲ್ಲ. ಈಗ ಅವರ ಪಾತ್ರಕ್ಕೆ ಶಿವಣ್ಣ ಧ್ವನಿ ನೀಡಿದ್ದಾರೆ. ಎರಡೂವರೆ ದಿನಗಳ ಕಾಲ ಡಬ್ಬಿಂಗ್ ಕೆಲಸ ಮಾಡಿದ್ದಾರಂತೆ ಶಿವಣ್ಣ.
ತಮ್ಮನ ಪಾತ್ರಕ್ಕೆ ಧ್ವನಿ ಹೊಂದಿಸುವುದು ಕಷ್ಟ. ಹಾಗಿದ್ದರೂ ತನ್ನ ಪ್ರಯತ್ನ ಮಾಡಿರುವುದಾಗಿ ಶಿವಣ್ಣ ಹೇಳಿದ್ದಾರೆ. ಈ ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್ ಕೂಡಾ ವಿಶೇಷ ಪಾತ್ರ ಮಾಡಿದ್ದಾರೆ.