Select Your Language

Notifications

webdunia
webdunia
webdunia
webdunia

ಮೈಸೂರಿನಲ್ಲಿ ನಡೆಯುತ್ತಿದೆ ಶಿವಣ್ಣ ‘ವೇದಾ’ದ ಭರ್ಜರಿ ಶೂಟಿಂಗ್

ಶಿವರಾಜ್ ಕುಮಾರ್
ಬೆಂಗಳೂರು: ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ವೇದಾ ಸಿನಿಮಾದ ಶೂಟಿಂಗ್ ಮೈಸೂರಿನಲ್ಲಿ ಭರದಿಂದ ಸಾಗುತ್ತಿದೆ.

ಇದೀಗ ಭರ್ಜರಿ ಫೈಟಿಂಗ್ ದೃಶ‍್ಯವೊಂದರ ಚಿತ್ರೀಕರಣ ನಡೆಯುತ್ತಿದೆ. ಇದಕ್ಕಾಗಿ ದುಬಾರಿ ಸೆಟ್ ಹಾಕಲಾಗಿದೆ. ಕಳೆದ ಕೆಲವು ದಿನಗಳಿಂದ ಶಿವಣ್ಣ ಮೈಸೂರಿನಲ್ಲಿ ಶೂಟಿಂಗ್ ಗಾಗಿ ಬೀಡುಬಿಟ್ಟಿದ್ದಾರೆ. ಇದು ಶಿವಣ್ಣ ಪಾಲಿನ 125 ನೇ ಸಿನಿಮಾ ಎನ್ನುವುದು ವಿಶೇಷ.

ಭಜರಂಗಿ ಬಳಿಕ ಹರ್ಷ ಜೊತೆಗೆ ಮಾಡುತ್ತಿರುವ ಮತ್ತೊಂದು ಸಿನಿಮಾ ಇದಾಗಿದೆ. ಶಿವರಾಜ್ ಕುಮಾರ್ ಹೋಂ ಬ್ಯಾನರ್ ನಲ್ಲಿ ಗೀತಾ ಶಿವರಾಜ್ ಕುಮಾರ್ ನಿರ್ಮಿಸುತ್ತಿರುವ ಸಿನಿಮಾ ಎಂಬುದು ಮತ್ತೊಂದು ವಿಶೇಷ.

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿ ಜರ್ನಿಗೆ 26 ವರ್ಷ: ಪತ್ನಿಗೆ ಧನ್ಯವಾದ ಸಲ್ಲಿಸಿದ ಕಿಚ್ಚ ಸುದೀಪ್