ಹೈದರಾಬಾದ್: ಕನ್ನಡದ ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ಪ್ರಭಾಸ್ ನಾಯಕರಾಗಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್ ರಿಲೀಸ್ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.
ಸದ್ಯಕ್ಕೆ ಚಿತ್ರೀಕರಣ ಹಂತದಲ್ಲಿರುವ ಸಲಾರ್ ಸಿನಿಮಾ ಮುಂಬರುವ ದಸರಾ ಹಬ್ಬದ ವೇಳೆಗೆ ಚಿತ್ರಮಂದಿರಕ್ಕೆ ಬರಲಿದೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.
ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಶ್ರುತಿ ಹಾಸನ್ ಅಭಿನಯಿಸುತ್ತಿದ್ದಾರೆ. ಇತ್ತೀಚೆಗೆ ಶ್ರುತಿ ಬರ್ತ್ ಡೇ ನಿಮಿತ್ತ ಹೊಸ ಪೋಸ್ಟರ್ ಒಂದನ್ನು ಸಲಾರ್ ತಂಡ ಬಿಡುಗಡೆ ಮಾಡಿತ್ತು.