Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಸಿಎಂ ಭೇಟಿಯಾಗಲು ಸಿದ್ಧರಾದ ನಟ ಶಿವರಾಜ್ ಕುಮಾರ್

webdunia
ಭಾನುವಾರ, 30 ಜನವರಿ 2022 (17:02 IST)
ಬೆಂಗಳೂರು: ಕೊರೋನಾ ನಿರ್ಬಂಧ ಎಲ್ಲಾ ಕಡೆ ಸಡಿಲವಾದರೂ ಚಿತ್ರಮಂದಿರಗಳ ಪಾಲಿಗೆ ಮಾತ್ರ ಮೊದಲಿನಂತೇ 50-50 ರೂಲ್ಸ್ ಮುಂದುವರಿಸಲಾಗಿದೆ. ಈ ಬಗ್ಗೆ ಚಿತ್ರರಂಗ ಅಸಮಾಧಾನಗೊಂಡಿದೆ.

ಈ ಹಿನ್ನಲೆಯಲ್ಲಿ ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿಯಾಗಲು ಚಿತ್ರರಂಗ ಸಜ್ಜಾಗಿದೆ. ಈ ಮೊದಲೂ ಶಿವಣ್ಣ ನೇತೃತ್ವದಲ್ಲಿ ಸಿಎಂ ಭೇಟಿ ಬಳಿಕ ಶೇ.100 ಆಸನ ಭರ್ತಿಗೆ ಅವಕಾಶ ಸಿಕ್ಕಿತ್ತು.

ಈ ಬಗ್ಗೆ ಮಾಧ‍್ಯಮಗಳೊಂದಿಗೆ ಮಾತನಾಡಿರುವ ಶಿವಣ್ಣ, ಎಲ್ಲಾ ರಂಗಕ್ಕೂ ವಿನಾಯ್ತಿ ನೀಡಲಾಗಿದೆ. ಆದರೆ ಚಿತ್ರರಂಗಕ್ಕೆ ಮಾತ್ರ ಯಾಕೆ ಈ ರೀತಿ ಮಾಡಿದ್ದಾರೆ ಗೊತ್ತಿಲ್ಲ. ಸಿಎಂ ಯಾವತ್ತೂ ಚಿತ್ರರಂಗದ ಪರವಾಗಿ ಇದ್ದಾರೆ. ಅವರ ಜೊತೆ ಮಾತುಕತೆ ನಡೆಸುತ್ತೇವೆ ಎಂದಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಹೀರೋ ಆದ್ರು ರಾಪರ್ ಚಂದನ್ ಶೆಟ್ಟಿ