Select Your Language

Notifications

webdunia
webdunia
webdunia
webdunia

ವಿಚ್ಛೇದನದ ಶಾಕ್ ಬಳಿಕ ಆಸ್ಪತ್ರೆಗೆ ದಾಖಲಾದ ಐಶ್ವರ್ಯಾ ರಜನೀಕಾಂತ್

ವಿಚ್ಛೇದನದ ಶಾಕ್ ಬಳಿಕ ಆಸ್ಪತ್ರೆಗೆ ದಾಖಲಾದ ಐಶ್ವರ್ಯಾ ರಜನೀಕಾಂತ್
ಹೈದರಾಬಾದ್ , ಬುಧವಾರ, 2 ಫೆಬ್ರವರಿ 2022 (10:51 IST)
Photo Courtesy: Google
ಹೈದರಾಬಾದ್: ಸೂಪರ್ ಸ್ಟಾರ್ ರಜನೀಕಾಂತ್ ಪುತ್ರಿ ಐಶ್ವರ್ಯಾ ಇತ್ತೀಚೆಗೆ ಪತಿ, ನಟ ಧನುಷ್ ಜೊತೆಗಿನ ದಾಂಪತ್ಯ ಜೀವನ ಕೊನೆಗೊಳಿಸುತ್ತಿರುವ ಸುದ್ದಿ ನೀಡಿ ಶಾಕ್ ಕೊಟ್ಟಿದ್ದರು. ಇದೀಗ ಐಶ್ವರ್ಯಾ ಆಸ್ಪತ್ರೆಗೆ ದಾಖಲಾದ ಸುದ್ದಿ ಬಂದಿದೆ.

ಕೊರೋನಾ ಸೋಂಕಿಗೊಳಗಾಗಿರುವ ಐಶ್ವರ್ಯಾ ಚಿಕಿತ್ಸೆಗಾಗಿ ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಮ್ಮ ಮುಂಬರುವ ಮ್ಯೂಸಿಕ್ ವಿಡಿಯೋ ಒಂದರ ಲಾಂಚ್ ಗಾಗಿ ಕಳೆದ ಕೆಲವು ದಿನಗಳಿಂದ ಐಶ್ವರ್ಯಾ ಹೈದರಾಬಾದ್ ನಲ್ಲಿದ್ದರು. ಈ ಆಲ್ಬಂ ಪ್ರೇಮಿಗಳ ದಿನದಂದು ಬಿಡುಗಡೆಯಾಗುತ್ತಿದೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋ ಪ್ರಕಟಿಸಿರುವ ಐಶ್ವರ್ಯಾ ಕೊರೋನಾ ಸೋಂಕಿಗೊಳಗಾಗಿದ್ದು ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ಮುಂದೆ ಪುನೀತ್ ಬರ್ತ್ ಡೇಗೆ ಸಸಿ ನೆಡುವ ಅಭಿಯಾನ