Select Your Language

Notifications

webdunia
webdunia
webdunia
Sunday, 6 April 2025
webdunia

ಪುನೀತ್ ಮೇಲಿನ ಗೌರವಕ್ಕೆ ರಿಲೀಸ್ ಮುಂದೂಡಿದ ಆರ್ ಆರ್ ಆರ್ ಸಿನಿಮಾ

ತ್ರಿಬಲ್ ಆರ್
ಬೆಂಗಳೂರು , ಮಂಗಳವಾರ, 1 ಫೆಬ್ರವರಿ 2022 (09:20 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮೇಲಿನ ಗೌರವದಿಂದ ತೆಲುಗು ಮೂಲದ ಪ್ಯಾನ್ ಇಂಡಿಯಾ ಸಿನಿಮಾ ತ್ರಿಬಲ್ ಆರ್ ತಂಡ ಬಿಡುಗಡೆ ಮುಂದೂಡಿದೆ.

ಈ ಮೊದಲು ಆರ್ ಆರ್ ಆರ್ ಸಿನಿಮಾವನ್ನು ಮಾರ್ಚ್ 18 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೆ ಮಾರ್ಚ್ 17 ರಂದು ಪುನೀತ್ ಬರ್ತ್ ಡೇ ಇದ್ದು, ಇದೇ ದಿನ ಅವರು ನಾಯಕರಾಗಿ ಅಭಿನಯಿಸಿದ್ದ ಕೊನೆಯ ಸಿನಿಮಾ ಜೇಮ್ಸ್ ಬಿಡುಗಡೆಯಾಗುವುದು ಬಹುತೇಕ ನಿಚ್ಚಳವಾಗಿದೆ.

ಈ ಹಿನ್ನಲೆಯಲ್ಲಿ ಜೇಮ್ಸ್ ಗೆ ತೊಂದರೆಯಾಗದಂತೆ ತ್ರಿಬಲ್ ಆರ್ ಸಿನಿಮಾ ತಂಡ ತನ್ನ ಸಿನಿಮಾ ರಿಲೀಸ್ ದಿನಾಂಕವನ್ನು ಮುಂದೂಡಿದ್ದು, ಮಾರ್ಚ್ 25 ಕ್ಕೆ ಬಿಡುಗಡೆ ಮಾಡಲು ನಿರ್ಧರಿಸಿದೆ. ರಾಜಮೌಳಿ ನಿರ್ದೇಶನದ ತ್ರಿಬಲ್ ಆರ್ ಸಿನಿಮಾ ತೆಲುಗು, ಕನ್ನಡ ಸೇರಿ ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರಿನಲ್ಲಿ ನಡೆಯುತ್ತಿದೆ ಶಿವಣ್ಣ ‘ವೇದಾ’ದ ಭರ್ಜರಿ ಶೂಟಿಂಗ್