Publish Date: Sat, 29 Jan 2022 (10:10 IST)
Updated Date: Sat, 29 Jan 2022 (10:19 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ಇಂದಿಗೆ ಮೂರು ತಿಂಗಳು ಕಳೆದಿದೆ. ಇಂದು ಕುಟುಂಬಸ್ಥರಿಂದ ಸಮಾಧಿಯಲ್ಲಿ ವಿಶೇಷ ಪೂಜೆ ನಡೆಯಲಿದೆ.
ಅಪ್ಪು ಸಮಾಧಿಯಲ್ಲಿ ಅವರ ಇಷ್ಟದ ಖಾದ್ಯವಿರಿಸಿ ಕುಟುಂಬಸ್ಥರು ಪೂಜೆ ಮಾಡಲಿದ್ದಾರೆ. ಇನ್ನು, ಅಭಿಮಾನಿಗಳೂ ಇಂದು ಸಾಕಷ್ಟು ಸಂಖ‍್ಯೆಯಲ್ಲಿ ಸಮಾಧಿಗೆ ಆಗಮಿಸಲಿದ್ದಾರೆ.
ಅಕ್ಟೋಬರ್ 29 ರಂದು ಪುನೀತ್ ಹೃದಯಸ್ತಂಬನದಿಂದಾಗಿ ಸಾವನ್ನಪ್ಪಿದ್ದರು. ಇಡೀ ಕರ್ನಾಟಕವೇ ಅವರ ನಿಧನದಿಂದ ಶಾಕ್ ಗೊಳಗಾಗಿತ್ತು.