Publish Date: Sat, 29 Jan 2022 (08:53 IST)
Updated Date: Sat, 29 Jan 2022 (08:54 IST)
ಮೈಸೂರು: ಶಕ್ತಿಧಾಮದಲ್ಲಿ ಮೊನ್ನೆಯಷ್ಟೇ ಮಕ್ಕಳೊಂದಿಗೆ ಗಣರಾಜ್ಯೋತ್ಸವ ಆಚರಿಸಿದ್ದ ಶಿವರಾಜ್ ಕುಮಾರ್ ಈಗ ಮಕ್ಕಳಿಗಾಗಿ ಹಾಡು ಹೇಳಿ ರಂಜಿಸಿದ್ದಾರೆ.
ಮೈಸೂರಿನ ಶಕ್ತಿಧಾಮದಲ್ಲಿರುವ ಮಕ್ಕಳೊಂದಿಗೆ ಮಗುವಾಗಿ ಕಾಲ ಕಳೆದಿರುವ ಶಿವಣ್ಣ ಅವರೊಡನೆ ನೆಲದಲ್ಲಿ ಕೂತು ಎಲ್ಲೆಲ್ಲಿ ನಾ ನೋಡಲಿ ಹಾಡನ್ನು ಹಾಡಿ ರಂಜಿಸಿದ್ದಾರೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೊನ್ನೆಯಷ್ಟೇ ಶಿವಣ್ಣ ಮಕ್ಕಳಿಗೆ ಬಿರಿಯಾನಿ ಬಡಿಸಿ ಖುಷಿಪಡಿಸಿದ್ದರು. ಪುನೀತ್ ರಾಜ್ ಕುಮಾರ್ ಇರುವವರೆಗೂ ಅವರೇ ಶಕ್ತಿಧಾಮದ ಸಂಪೂರ್ಣ ಹೊಣೆ ಹೊತ್ತಿದ್ದರು. ಆದರೆ ಈಗ ಅವರಿಲ್ಲದ ಕಾರಣ ಇನ್ನು ಮುಂದೆ ಶಕ್ತಿಧಾಮದ ಜವಾಬ್ಧಾರಿ ತಮ್ಮದು ಎಂದು ಶಿವಣ್ಣ ಹೇಳಿಕೊಂಡಿದ್ದರು. ಅದರಂತೆ ತಿಂಗಳಲ್ಲಿ ಮೂರು ದಿನ ಶಕ್ತಿಧಾಮಕ್ಕಾಗಿ ಮೀಸಲು ಎಂದಿದ್ದರು. ಅದರಂತೆ ನಡೆದುಕೊಳ್ಳುತ್ತಿದ್ದಾರೆ.