Select Your Language

Notifications

webdunia
webdunia
webdunia
webdunia

ಅಭಿಮಾನಿಗಳಿಗೆ ಪ್ರೀತಿಯ ಕೈತುತ್ತು ನೀಡಿದ ಶಿವರಾಜ್ ಕುಮಾರ್

ಅಭಿಮಾನಿಗಳಿಗೆ ಪ್ರೀತಿಯ ಕೈತುತ್ತು ನೀಡಿದ ಶಿವರಾಜ್ ಕುಮಾರ್
ಮೈಸೂರು , ಗುರುವಾರ, 27 ಜನವರಿ 2022 (10:12 IST)
ಮೈಸೂರು: ನಿನ್ನೆಯಷ್ಟೇ ಮೈಸೂರಿನ ಶಕ್ತಿಧಾಮದಲ್ಲಿ ಮಕ್ಕಳ ಜೊತೆ ಕಾಲ ಕಳೆದು ಗಣರಾಜ್ಯೋತ್ಸವ ಆಚರಿಸಿ ಸಂಭ್ರಮಪಟ್ಟ ನಟ ಶಿವರಾಜ್ ಕುಮಾರ್ ಇಂದೂ ಅಭಿಮಾನಿಗಳೊಂದಿಗೆ ಕಾಲ ಕಳೆದಿದ್ದಾರೆ.

ಮೈಸೂರಿನಲ್ಲಿರುವ ಶಿವಣ್ಣ ಇಂದು ದೊಣ್ಣೆ ಬಿರಿಯಾನಿ ಸೆಂಟರ್ ಒಂದರ ಉದ್ಘಾಟನೆಗೆ ತೆರಳಿದ್ದು, ಈ ವೇಳೆ ಅಲ್ಲಿನ ಸಿಬ್ಬಂದಿಗೆ ಕೈತುತ್ತು ನೀಡಿ ಖುಷಿಪಡಿಸಿದ್ದಾರೆ.

ಉದ್ಘಾಟನೆಗೆ ಬಂದಿದ್ದ ಶಿವಣ್ಣನನ್ನು ಮುತ್ತಿಕೊಂಡ ಯುವಕರು ಅವರಿಂದ ಕೈತುತ್ತು ಪಡೆದಿದ್ದಲ್ಲದೆ, ಸೆಲ್ಫೀ ತೆಗೆಸಿಕೊಂಡು, ಕಾಲಿಗೆ ಬಿದ್ದು ನಮಸ್ಕರಿಸಿ ಖುಷಿಪಟ್ಟರು. ಇನ್ನು, ಅಭಿಮಾನಿಗಳಿಗೆ ಕೊಂಚವೂ ಬೇಸರಮಾಡದೇ ಎಲ್ಲರನ್ನೂ ಮಾತನಾಡಿಸಿ ಶಿವಣ್ಣ ತೆರಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಡವ ರಾಸ್ಕಲ್ ಸಿನಿಮಾಗೆ ಟಾಲಿವುಡ್ ನಲ್ಲೂ ಬೇಡಿಕೆ