Select Your Language

Notifications

webdunia
webdunia
webdunia
webdunia

ಬಡವ ರಾಸ್ಕಲ್ ಸಿನಿಮಾಗೆ ಟಾಲಿವುಡ್ ನಲ್ಲೂ ಬೇಡಿಕೆ

ಬಡವ ರಾಸ್ಕಲ್ ಸಿನಿಮಾಗೆ ಟಾಲಿವುಡ್ ನಲ್ಲೂ ಬೇಡಿಕೆ
ಬೆಂಗಳೂರು , ಗುರುವಾರ, 27 ಜನವರಿ 2022 (08:55 IST)
ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಸಿನಿಮಾ ಥಿಯೇಟರ್ ನಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು. ಈ ಸಿನಿಮಾಗೆ ಈಗ ಟಾಲಿವುಡ್ ನಲ್ಲೂ ಬೇಡಿಕೆ ಬಂದಿದೆ.

ಇತ್ತೀಚೆಗಿನ ದಿನಗಳಲ್ಲಿ ಕನ್ನಡ ಸಿನಿಮಾಗಳಿಗೆ ಪರಭಾಷೆಯಲ್ಲೂ ಬೇಡಿಕೆ ಬರುತ್ತಿರುವುದು ಹೊಸದೇನಲ್ಲ. ಈ ಸಾಲಿಗೆ ಬಡವ ರಾಸ್ಕಲ್ ಕೂಡಾ ಸೇರಿಕೊಳ್ಳುತ್ತಿದೆ.

ಬಡವ ರಾಸ್ಕಲ್ ಸಿನಿಮಾದ ತೆಲುಗು ಡಬ್ಬಿಂಗ್ ಗೆ ಬೇಡಿಕೆ ಬಂದಿದ್ದು, ಡಬ್ಬಿಂಗ್ ಕೆಲಸಗಳು ಈಗಾಗಲೇ ಶುರುವಾಗಿದೆಯಂತೆ. ಎಲ್ಲಾ ಅಂದುಕೊಂಡಂತೇ ಆದರೆ ಬಡವ ರಾಸ್ಕಲ್ ಸದ್ಯದಲ್ಲೇ ತೆಲುಗಿನಲ್ಲೂ ಬಿಡುಗಡೆಯಾಗಲಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಕ್ತಿಧಾಮದ ಮಕ್ಕಳ ಪಾಲಿಗೆ ಬಸ್ ಡ್ರೈವರ್ ಆದ್ರು ಶಿವರಾಜ್ ಕುಮಾರ್