ಬೆಂಗಳೂರು: ಗಣರಾಜ್ಯೋತ್ಸವ ದಿನಕ್ಕೆ ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಜೇಮ್ಸ್ ಚಿತ್ರತಂಡ ಭರ್ಜರಿ ಕೊಡುಗೆ ನೀಡಲಿದೆ.
									
			
			 
 			
 
 			
			                     
							
							
			        							
								
																	ಪುನೀತ್ ನಾಯಕರಾಗಿ ನಟಿಸಿದ್ದ ಕೊನೆಯ ಸಿನಿಮಾ ಜೇಮ್ಸ್ ನ  ವಿಶೇಷ ಪೋಸ್ಟರ್ ಒಂದು ಇಂದು ಬಿಡುಗಡೆಯಾಗಲಿದೆ. ಇಂದು ಬೆಳಿಗ್ಗೆ 11.11 ಕ್ಕೆ ಚಿತ್ರದ ಹೊಸ ಪೋಸ್ಟರ್ ಹೊರಬರಲಿದೆ. ಇದು ಪುನೀತ್ ಅಭಿಮಾನಿಗಳಲ್ಲಿ ಹೊಸ ಜೋಷ್ ತಂದಿದೆ.
									
										
								
																	ಜೇಮ್ಸ್ ತಂಡ ಇತ್ತೀಚೆಗಷ್ಟೇ ಚಿತ್ರೀಕರಣ ಮುಗಿಸಿತ್ತು. ಕೊನೆಯ ಹಂತದಲ್ಲಿ ಶಿವರಾಜ್ ಕುಮಾರ್-ರಾಘವೇಂದ್ರ ರಾಜ್ ಕುಮಾರ್ ಕೂಡಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾರ್ಚ್ 17 ರಂದು ಪುನೀತ್ ಬರ್ತ್ ಡೇಗೆ ಸಿನಿಮಾ ಹೊರಬರುವ ಸಾಧ್ಯತೆಯಿದೆ.