ಬೆಂಗಳೂರು: ಎಸ್ ಎಸ್ ರಾಜಮೌಳಿ ನಿರ್ದೇಶನದ ತ್ರಿಬಲ್ ಆರ್ ಸಿನಿಮಾ ಕನ್ನಡದಲ್ಲೂ ರಿಲೀಸ್ ಆಗಲಿದೆ. ಇದಕ್ಕಾಗಿ ಮಾರ್ಚ್ 18 ರ ದಿನಾಂಕವನ್ನು ಘೋಷಣೆಯೂ ಮಾಡಿದೆ.
ಆದರೆ ಸಿನಿಮಾ ಕರ್ನಾಟಕದಲ್ಲಿ ಸಿನಿಮಾ ರಿಲೀಸ್ ಗೆ ಈಗ ಪುನೀತ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಭಯ ಶುರುವಾಗಿದೆ.
ಜೇಮ್ಸ್ ಸಿನಿಮಾ ಕೂಡಾ ಮಾರ್ಚ್ 17 ರಂದು ಬಿಡುಗಡೆಯಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು ಪುನೀತ್ ಕೊನೆಯ ಚಿತ್ರವಾಗಿರುವುದರಿಂದ ಸಹಜವಾಗಿಯೇ ಕನ್ನಡದ ಸಿನಿಮಾಭಿಮಾನಿಗಳು ಈ ಸಿನಿಮಾ ಬಗ್ಗೆಯೇ ಒಲವು ತೋರುತ್ತಾರೆ. ಹೀಗಾಗಿ ಮರುದಿನವೇ ತ್ರಿಬಲ್ ಆರ್ ಸಿನಿಮಾ ಬಿಡುಗಡೆಯಾದರೂ ಜನ ನೋಡುವುದು ಅನುಮಾನ. ಹೀಗಾಗಿ ಮಾರ್ಚ್ 18 ರಂದು ಸಿನಿಮಾ ಬಿಡುಗಡೆಗೆ ಹೊರಟಿರುವ ತ್ರಿಬಲ್ ಆರ್ ಗೆ ಜೇಮ್ಸ್ ಭಯ ಶುರುವಾಗಿದೆ.