Select Your Language

Notifications

webdunia
webdunia
webdunia
webdunia

ಅಶ್ವಿನಿ ಪುನೀತ್ ರಾಜಕುಮಾರ್ ಮೇಲೆ ಇನ್ನೊಂದು ಜವಾಬ್ದಾರಿ

ಅಶ್ವಿನಿ ಪುನೀತ್ ರಾಜಕುಮಾರ್ ಮೇಲೆ ಇನ್ನೊಂದು ಜವಾಬ್ದಾರಿ
ಬೆಂಗಳೂರು , ಗುರುವಾರ, 20 ಜನವರಿ 2022 (16:19 IST)
ಅಶ್ವಿನಿ ಪುನೀತ್​​ರಾಜ್​​ಕುಮಾರ್ ಈಗ ಮತ್ತೊಂದು ಹೊಸ ಜವಾಬ್ದಾರಿಯನ್ನ ತೆಗೆದುಕೊಂಡಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಲಹಾ ಸಮಿತಿಯ ಸದಸ್ಯೆಯಾಗಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಆಯ್ಕೆಯಾಗಿದ್ದಾರೆ. ಈ ವಿಷಯವನ್ನ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ತಿಳಿಸಿದ್ದಾರೆ.
ಕನ್ನಡ ಚಿತ್ರರಂಗದ ದೊಡ್ಮನೆ ಮಗ ಹಾಗೂ ಕೋಟ್ಯಂತರ ಅಭಿಮಾನಿಗಳ ಅಚ್ಚುಮೆಚ್ಚಿನ ನಟನಾಗಿದ್ದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಆಕಾಲಿಕ ನಿಧನದಿಂದ ಇಡೀ ಕರುನಾಡು ಬಡವಾಗಿದೆ. ಪವರ್ ಸ್ಟಾರ್ ಅಗಲಿ ಮೂರು ತಿಂಗಳು ಕಳೆಯುತ್ತಾ ಇದ್ದರೂ, ಅವರ ನೆನಪು ಅಜರಾಮರವಾಗಿದೆ. ಪುನೀತ್ ಇಲ್ಲದೆ ರಾಜ್ ಕುಟುಂಬ ಆ ನೋವಿಂದ ಹೊರಬಂದಿಲ್ಲ.
 
ಪುನೀತ್ ಪತ್ನಿ ಅಶ್ವಿನಿ ನಿಧಾನವಾಗಿ ಈ ನೋವಿನಿಂದ ಹೊರ ಬರಲು ಪ್ರಯತ್ನ ಮಾಡುತ್ತಿದ್ದಾರೆ. ಅಪ್ಪು ಮಾಡಬೇಕಿದ್ದ ಕೆಲಸಗಳನ್ನ, ಇದೀಗ ಅಶ್ವಿನಿ ಪುನೀತ್​​ರಾಜ್​​ಕುಮಾರ್ ಮಾಡುತ್ತಿದ್ದಾರೆ. ಅದರಲ್ಲಿ ಅಪ್ಪು ನಿಧನದ ಬಳಿಕ ಅಶ್ವಿನಿ ಪುನೀತ್​ ರಾಜ್​ಕುಮಾರ್ ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟು, ಪಿ.ಆರ್‌.ಕೆ ಜವಾಬ್ದಾರಿ ಜೊತೆಗೆ, ಅಪ್ಪು ಕನಸುಗಳನ್ನು ನನಸು ಮಾಡಲು ಮುಂದಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಟೋ ಚಾಲಕರು V/S ರಾಪಿಡೋ