Publish Date: Thu, 20 Jan 2022 (10:19 IST)
Updated Date: Thu, 20 Jan 2022 (10:20 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಗೆ ಕಿರಾತಕ ಸಿನಿಮಾ ನಿರ್ದೇಶಿಸಿದ್ದ ಸ್ಯಾಂಡಲ್ ವುಡ್ ನಿರ್ದೇಶಕ ಪ್ರದೀಪ್ ರಾಜ್ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಅವರಿಗೆ 46 ವರ್ಷ ವಯಸ್ಸಾಗಿತ್ತು. ಮಧುಮೇಹದಿಂದ ಬಳಲುತ್ತಿದ್ದ ಅವರಿಗೆ ಕೆಲವು ದಿನಗಳ ಮೊದಲು ಕೊರೋನಾ ಸೋಂಕು ತಗುಲಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ನೀನಾಸಂ ಸತೀಶ್ ಅಭಿನಯದ ಅಂಜದ ಗಂಡು, ಜೆಕೆ ಅಭಿನಯದ ಬೆಂಗಳೂರು -023 ಸೇರಿದಂತೆ ಕೆಲವು ಸಿನಿಮಾಗಳನ್ನು ನಿರ್ದೇಶಿಸಿದ್ದರು. ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ತವರು ಪಾಂಡಿಚೇರಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.