Select Your Language

Notifications

webdunia
webdunia
webdunia
webdunia

ಆರ್ ಆರ್ ಆರ್ ಸಿನಿಮಾ ರಿಲೀಸ್ ಗೆ ಹೊಸ ದಿನಾಂಕ ಫಿಕ್ಸ್?

ಆರ್ ಆರ್ ಆರ್ ಸಿನಿಮಾ ರಿಲೀಸ್ ಗೆ ಹೊಸ ದಿನಾಂಕ ಫಿಕ್ಸ್?
ಹೈದರಾಬಾದ್ , ಗುರುವಾರ, 20 ಜನವರಿ 2022 (09:35 IST)
ಹೈದರಾಬಾದ್: ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಎಲ್ಲಾ ಸರಿ ಹೋಗಿದ್ದರೆ ಇಷ್ಟೊತ್ತಿಗಾಗಲೇ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣಬೇಕಿತ್ತು. ಆದರೆ ಕೊರೋನಾದಿಂದಾಗಿ ಎಲ್ಲವೂ ತಲೆಕೆಳಗಾಗಿತ್ತು.

ಜನವರಿ 7 ರಂದು ಬಿಡುಗಡೆಯಾಗಬೇಕಿದ್ದ ಸಿನಿಮಾ ಮುಂದೂಡಿಕೆಯಾಗಿತ್ತು. ಇದೀಗ ತ್ರಿಬಲ್ ಆರ್ ಯಾವಾಗ ಬಿಡುಗಡೆಯಾಗಬಹುದು ಎಂದು ಅಭಿಮಾನಿಗಳು ಎದಿರುನೋಡುವಂತಾಗಿದೆ.

ಮೂಲಗಳ ಪ್ರಕಾರ ಮೇ ಮೊದಲ ವಾರದಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ‍್ಯತೆಯಿದೆ. ಮೇ 2 ರಂದು ಈದ್ ಹಬ್ಬವಿದೆ. 1 ರಂದು ಕಾರ್ಮಿಕರ ದಿನಾಚರಣೆಯ ರಜೆಯಿದೆ. ಹೀಗಾಗಿ ಸಾಲು ಸಾಲು ರಜೆಯ ನಡುವೆ ಸಿನಿಮಾ ಬಿಡುಗಡೆ ಮಾಡಿದರೆ ಗಳಿಕೆಗೆ ಪ್ಲಸ್ ಪಾಯಿಂಟ್ ಆಗಲಿದೆ ಎನ್ನುವುದು ಚಿತ್ರತಂಡದ ಲೆಕ್ಕಾಚಾರ. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಕೊಡಬೇಕಿದೆಯಷ್ಟೇ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪ-ಅಮ್ಮ ಹೋದ ವರ್ಷ ಬರ್ತ್ ಡೇ ಆಚರಿಸಲ್ಲ: ದುನಿಯಾ ವಿಜಯ್