Publish Date: Wed, 19 Jan 2022 (12:25 IST)
Updated Date: Wed, 19 Jan 2022 (09:27 IST)
ಬೆಂಗಳೂರು: ಕೊರೋನಾ ನಿರ್ಬಂಧಿತ ನಿಯಮಗಳಿಂದಾಗಿ ಹೊಡೆತ ಬೀಳುತ್ತಿರುವುದು ಸಣ್ಣ ಬಜೆಟ್ ನ ಹೊಸಬರ ಸಿನಿಮಾಗಳ ಮೇಲೆ.
ಸ್ಟಾರ್ ಸಿನಿಮಾಗಳು ಬಿಡುಗಡೆ ದಿನಾಂಕ ಮುಂದೂಡಿಕೆ ಮಾಡಿ ಕೊರೋನಾ ನಿಯಂತ್ರಣಕ್ಕೆ ಬಂದ ಮೇಲೆ ಥಿಯೇಟರ್ ನಲ್ಲೇ ಬಿಡುಗಡೆ ಮಾಡಿ ಲಾಭ ಮಾಡಿಕೊಳ್ಳುತ್ತವೆ. ಇಲ್ಲದೇ ಹೋದರೆ ಒಟಿಟಿಗಳೂ ಸ್ಟಾರ್ ಸಿನಿಮಾಗಳನ್ನು ದೊಡ್ಡ ಮೊತ್ತ ಕೊಟ್ಟು ಖರೀದಿ ಮಾಡುತ್ತವೆ.
ಆದರೆ ಸಣ್ಣ ಬಜೆಟ್ ನ ಹೊಸಬರ ಸಿನಿಮಾಗಳನ್ನು ಒಟಿಟಿಯಲ್ಲೂ ಕೊಳ್ಳಲು ಹಿಂದೆ-ಮುಂದೆ ನೋಡುತ್ತಾರೆ. ಇನ್ನು, ಥಿಯೇಟರ್ ಗಳೂ ಸಂಪೂರ್ಣ ತೆರೆದಿಲ್ಲ. ಸಂಪೂರ್ಣ ತೆರೆಯಲು ಅವಕಾಶ ಸಿಕ್ಕ ಮೇಲೆ ಸ್ಟಾರ್ ಸಿನಿಮಾಗಳದ್ದೇ ಸರತಿಯಿರುತ್ತದೆ. ಈ ನಡುವೆ ಹೊಸಬರ ಸಿನಿಮಾಗಳು ನೆಲೆಯಿಲ್ಲದಂತಾಗುತ್ತಿವೆ.